ಕಾರ್ಕಳದ ಆರಕ್ಷರ ಠಾಣಾ ಮಹಿಳಾ ಸಿಬ್ಬಂದಿವರ್ಗದವರೊಂದಿಗೆ ಕರುಣಾಳು ಬಾ ಬೆಳಕು ಪ್ರತಿಷ್ಠಾನದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಮಾಡುತ್ತಿದ್ದಾರೆ. ನಮ್ಮೆಲ್ಲರಿಗೆ ರಕ್ಷಣೆಯನ್ನು ನೀಡುವ ಮೂಲಕ ಆರಕ್ಷಕರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಅಲ್ಲದೆ ಪೋಲಿಸ್ ನಿರಕ್ಷಣಾಧಿಕಾರಿ ಎಎಸ್ ಪಿ ಹರ್ಷ ಪ್ರಿಯಂವದ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕರುಣಾಳು ಬಾ ಬೆಳಕು ಪ್ರತಿಷ್ಠಾನದ ರಮಿತಾ ಶೈಲೇಂದ್ರ, ಮಮತಾ, ಸ್ವಾತಿ ಸಂತೋಷ್, ಹಾಗೂ ಪಲ್ಲವಿ ಈ ಸಂದರ್ಭದಲ್ಲಿದ್ದರು.