ಕಾರ್ಕಳ ರೋಟರಿ ಕ್ಲಬ್ ರಾಕ್ ಸಿಟಿ ವತಿಯಿಂದ. ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇದರ ಸಹಯೋಗದಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧಿಕ್ಷಕರಾದಂತಹ ಜಿತೇಂದ್ರ ಕುಮಾರ್ ದಯಾಮ ಐ.ಪಿ.ಎಸ್ ರವರ ನಿರ್ದೇಶನದಂತೆ ಹಾಗೂ ಡಿವೈಎಸ್ ಪಿ ರವರಾದಂತಹ ರಾಘವೇಂದ್ರ ಆರ್ ನಾಯ್ಕ ರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸತೀಶ್ ಬಿ.ಎಸ್ ಮತ್ತು ಸಬ್ ಇನ್ಸ್ಪೆಕ್ಟರ್ ಬಸವರಾಜ್ ರವರ ನೇತೃತ್ವದಲ್ಲಿ ಸಿ ಪಿ ಆರ್ ತರಬೇತಿ ಕಾರ್ಯಕ್ರಮವನ್ನು ಫೆ ೦೪ ರಂದು ಕುಕ್ಕುಂದೂರು, ಪಿಲಿಚಂಡಿಸ್ಥಾನದ ಹತ್ತಿರ, ಎ ಎನ್ ಫ್ ತರಬೇತಿ ಕೇಂದ್ರದಲ್ಲಿ ನಡೆಯಿತು.
ಸಭಾಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ರೋ| ಉಪೇಂದ್ರ ವಾಗ್ಲೆ, ಮುಖ್ಯ ಅತಿಥಿಗಳಾಗಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್, ನಕ್ಷಲ್ ನಿಗ್ರಹ ಪಡೆಯ ಪಿಎಸ್‌ಐ ಸತೀಶ್ ಬಿ.ಎಸ್. ಡಾ. ಸುದರ್ಶನ್ ನಾಯಕ್, ಅರಿವಳಿಕೆ ತಜ್ಞ, ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಡಾ. ಮೋಕ್ಷಿತ್, ಕೆ.ಎಂ.ಸಿ. ಮಣಿಪಾಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ನಂತರ ಕೆಎಂಸಿ ಮಣಿಪಾಲ ಇಲ್ಲಿನ ಪರಿಣಿತ ವೈದ್ಯರ ತಂಡದಿಂದ ಸಿ ಪಿ ಆರ್ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಪೂರ್ವಾಧ್ಯಕ್ಷರುಗಳಾದ ರೋ| ಸುರೇಂದ್ರ ನಾಯಕ್ ಮತ್ತು ರೋ| ಚಿರಾಗ್ ರಾವ್ ಉಪಸ್ಥಿತರಿದ್ದರು.
ಸುಮಾರು 85 ನೌಕರರು ಇದರ ತರಬೇತಿ ಪಡೆದರು.