ಕಾರ್ಕಳ

ಏಪ್ರಿಲ್ 9,10ರಂದು ಪುಚ್ಚೆಮೊಗರು ಎಲಿಯ ಊರೂಸ್

ಇರುವೈಲು ಪುಚ್ಚಮೊಗರು ಎಲಿಯ ಮನಾರುಲ್ ಹುದಾವ ಜುಮಾ ಮಸೀದಿ ಸಯ್ಯಿದ್ ಡಾ. ಅಬೂಬಕ್ಕರ್ ವಲಿಯುಲ್ಲಾಹಿ (ಖ.ಸಿ.) ಇವರು ಸುಮಾರು 700 ವರ್ಷಗಳ ಹಿಂದೆ ಇಲ್ಲಿ ಅಂತ್ಯಮಿಸಿರುವ ದಕ್ಷಿಣ ಭಾರತದ ಖ್ಯಾತ ಅತ್ಯಧಿಕ ಧಾರ್ಮಿಕ ಸ್ಥಳವಾಗಿ ಗುರುತಿಸಲ್ಪಟ್ಟ ಸ್ಥಳದಲ್ಲಿ ಎ. 9,10ರಂದು ಊರೂಸ್ ನಡೆಯಲಿದೆ.

ನೂರಾರು ವರ್ಷಗಳಿಂದ ಸಯ್ಯದ್ ಡಾ। ಅಬೂಬಕ್ಕರ್ ವಲಿಯುಲ್ಲಾಹಿ (ಖ.ಸಿ.)ಯವರ ದರ್ಗಾಕ್ಕೆ ಜಾತಿ ಮತ ಬೇಧವಿಲ್ಲದೆ ಭಕ್ತಾಭಿಮಾನಿಗಳು ತಮ್ಮ ಕಷ್ಟ ಪರಿಹಾರಗಳಿಗಾಗಿ ಸಂದರ್ಶಿಸುತ್ತಾರೆ. ಅನೇಕ ಜನರಿಗೆ ಪರಿಹಾರ ಸಿಕ್ಕಿರುತ್ತದೆ. ನಾವು ಎರಡು ವರ್ಷಕ್ಕೊಮ್ಮೆ ಇದರ ವಠಾರದಲ್ಲಿ ಉರೂಸ್ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ಎ ವರ್ಷ ಎಪ್ರಿಲ್ 9-10ರಂದು ನಡೆಸಲಾಗುವುದು ಎಂದು ಮಸ್ಜಿದ್ ಅಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಈ ಎರಡು ದಿವಸದಲ್ಲಿ ಅನೇಕ ರೀತಿಯ ವಿವಿಧ ಕಾರ್ಯಕ್ರಮಗಳಿರುತ್ತದೆ. ಎಪ್ರಿಲ್ 9ರ ಸಂಜೆ ಮಸೀದಿಯ ವಠಾರದಲ್ಲಿ ಮಸೀದಿಯ ಅಧ್ಯಕ್ಷರು ಧ್ವಜಾರೋಹಣ ಮಾಡಲಿದ್ದು, ಅಂದು ಸಂಜೆ 5 ಗಂಟೆಗೆ ದಪ್ಪು ಕಾರ್ಯಕ್ರಮ ಹಾಗೂ ಮಗರಿಬ್ ನಮಾಜಿನ ನಂತರ ಅಸಯ್ಯದ್ ಕಾಜೂರು ತಂಜಲ್‌ರವರ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಬಹು। ಶೈಖುನಾ। ತ್ವಾಖ ಅಹ್ಮದ್ ಮುಸ್ಲಿಯಾರ್ ಉದ್ಘಾಟನೆ ಮಾಡಲಿದ್ದಾರೆ. ಅಂದು ಮುಖ್ಯ ಪ್ರಭಾಷಣ ಬಹು। ಉಮರ್ ಸಅದಿ ಅಲ್-ಅಫೈಲಿ ನಾವೂರು ಮಾಡಲಿದ್ದಾರೆ.

ಎಪ್ರಿಲ್ 10ನೇ ತಾರೀಕಿನಂದು ಊರೂಸಿನ ಸಮಾರೋಪ ಸಮಾರಂಭ ನಡೆಯಲಿದ್ದು ಅಂದು ಸಂಜೆ 4 ಗಂಟೆಗೆ ಅಸಯ್ಯದ್ ಕಾಜೂರು ತಂಬಳ್‌ರವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ನಡೆಯಲಿದ್ದು ಅಂದು ಗಂಟೆ 5.30ಕ್ಕೆ ಸರ್ವ ಧರ್ಮದ ಸೌಹಾರ್ದಕೂಟ ಏರ್ಪಡಿಸಲಿದ್ದು ಇದರಲ್ಲಿ ರಾಜಕೀಯ ನೇತಾರರು, ಗಣ್ಯ ವ್ಯಕ್ತಿಗಳು, ಎಲ್ಲಾ ಜಾತಿ ಧರ್ಮಗುರುಗಳು ಒಂದಾಗಿ ಭಾಗವಹಿಸಿ ಮಾಡುವ ಕಾರ್ಯಕ್ರಮವಾಗಿದೆ. ಅಂದು ಮಗರಿಬ್ ನಮಾಜಿನ ನಂತರ ಅಸಯ್ಯದ್ ಕಾಜೂರು ತಂಬಳರವರ ನೇತೃತ್ವದಲ್ಲಿ ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ಅಂತರಾಷ್ಟ್ರೀಯ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮಾಡಲಿದ್ದಾರೆ. ಅಂದು ರಾತ್ರಿ 10 ಗಂಟೆಯಿಂದ ಅನ್ನದಾನ ಕಾರ್ಯಕ್ರಮ ಇರುತ್ತದೆ ಎಂದು ಮಸ್ಜಿದ್ ಆಡಳಿತ ಸಮಿತಿ ತಿಳಿಸಿದೆ.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಹಮ್ಮದ್ ಇಮ್ರಾನ್, ಕೋಶಧಿಕಾರಿ ಐ ಯಂ ಇಕ್ಬಾಲ್, ಸದಸ್ಯ ಎಂ. ಆಸೀಫ್, ಇಸ್ಮಾಯಿಲ್ ಉಪಸ್ಥಿತರಿದ್ದರು.

 

 

Related posts

ನಾಳೆ ಡಿ.11ರಂದು ಶಾಲಾ ಕಾಲೇಜುಗಳಿಗೆ ಹಾಗೂ ಸರಕಾರಿ ಕಚೇರಿಗಳಿಗೆ ರಜೆ

Madhyama Bimba

ನಕ್ರೆ: ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಉದ್ಘಾಟನೆ

Madhyama Bimba

ವಿಶೇಷ ಠೇವಣಿ ಯೊಜನೆಯ ಮೂಲಕ ಒಂದೇ ತಿಂಗಳಲ್ಲಿ 2.76 ಕೋಟಿ ಸಂಗ್ರಹ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More