“ಬಿಲ್ಲವ ಸಮಾಜ ಸೇವಾ ಸಮಿತಿ ರಿಜಿಸ್ಟರ್ ನಕ್ರೆ” ಇಲ್ಲಿ ನಿರ್ಮಾಣಗೊಂಡಿರುವ “ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ” ಉದ್ಘಾಟನಾ ಸಮಾರಂಭ ಫೆ. 2ರಂದು ನೆರವೇರಿತು.
ಬೆಳಿಗ್ಗೆ ಧಾರ್ಮಿಕ ಪೂಜ್ಯ ವಿಧಿ ವಿಧಾನಗಳು ನೆರವೇರಿದವು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ದೀಪ ಬೆಳಗಿಸುವುದರ ಮೂಲಕ ಸಭಾಭವನ ಉದ್ಘಾಟಿಸಿದರು.
ವೇದಿಕೆಯಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಮುದ್ರಾಡಿ ಇದರ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ, ನಕ್ರೆಯ ನಿವೃತ್ತ ಅಂಚೆಪಾಲಕ ಕೆ ಚಂದಪ್ಪ ಪಟ್ಲಗುಡ್ಡೆ, ನಕ್ರೆಯ ವಿಶ್ರಾಂತ ಪತ್ರಕರ್ತ ಬಿಪಿನ್ ಚಂದ್ರ ಪಾಲ್ ನಕ್ರೆ, ಯುವ ವಾಹಿನಿ (ರಿ.) ಕಾರ್ಕಳ ಘಟಕದ ಅಧ್ಯಕ್ಷ ಮಮತಾ ಅಂಚನ್, ಯೂತ್ ಬಿಲ್ಲವ (ರಿ.) ಕಾರ್ಕಳದ ಅಧ್ಯಕ್ಷ ಸುಕೇಶ್ ಕರ್ಕೇರ, ಉದ್ಯಮಿಗಳಾದ ರಜತ್ ರಾಮ್ ಮೋಹನ್ ಬಜೆಗೋಳಿ ಮತ್ತು ಸುಧೀರ್ ಪೂಜಾರಿ ಅಮ್ಮಾಸ್ ಉಪಸ್ಥಿತರಿದ್ದರು.
ನಕ್ರೆ ಬಿಲ್ಲವ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ ನಕ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಭಾಭವನಕ್ಕೆ ಹಣಕಾಸು ನೆರವು ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ನಕ್ರೆಯ ಐದು ಜನ ಆಶಾ ಕಾರ್ಯಕರ್ತರನ್ನು, ಲೈನ್ ಮ್ಯಾನ್ ಶಿವಾನಂದ ದೇವಾಡಿಗರನ್ನು, ಕರಾಟೆ ಕ್ಷೇತ್ರದ ಸಾಧಕಿ ಕುಮಾರಿ ಖುಷಿ, ಸಂಘದ ಭಜನಾ ಮಂಡಳಿಗೆ ಭಜನೆ ತರಬೇತಿ ನೀಡಿದ ಯೋಗೇಶ್ ಕಿಣಿ ಕಾರ್ಕಳ ಮತ್ತು ಸುಕೇಶ್ ಕುಮಾರ್ ಸಾಣೂರು ಇವರುಗಳನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ನಕ್ರೆಯ ಬೇರೆ ಬೇರೆ ಶಾಲಾ ಮಕ್ಕಳಿಂದ ಮತ್ತು ಸಂಘದ ಸದಸ್ಯರಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.