ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿಗೆ ರಜತ ಸಂಭ್ರಮ- ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಬಡ ಮತ್ತು ಗ್ರಾಮೀಣ ಭಾಗದ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಘೋಷಣೆ
ಕಾರ್ಕಳ: ಕಾರ್ಕಳ ನಗರ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿದ್ದು ಶಿಸ್ತು, ಗುಣಮಟ್ಟ, ಚಟುವಟಿಕಾ ಪೂರ್ಣ ಜ್ಞಾನಾಧಾರಿತ ಶಿಕ್ಷಣ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಸಿದ್ಧಿಯಾಗಿರುವ ಸಂಸ್ಥೆ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು. ಅತೀ ಕಡಿಮೆ ಶುಲ್ಕ ಹಾಗೂ...
