ಕಾರ್ಕಳ

ಕಾರ್ಕಳ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಮೋಟಾರ್ ಸೈಕಲ್ ಡಿಕ್ಕಿ

ಕಾರ್ಕಳ: ಬೆಳ್ಮಣ್ ಪೇಟೆಯಲ್ಲಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಮೋಟಾರ್ ಸೈಕಲ್ ಡಿಕ್ಕಿಯಾದ ಘಟನೆ ಡಿ. 01ರಂದು ವರದಿಯಾಗಿದೆ.


ಪೆರ್ಡೂರಿನ ವಸಂತ ಗಾಯಗೊಂಡವರು.

ವಸಂತರವರು ರಸ್ತೆ ದಾಟಲು ನಿಂತಿದ್ದ ಸಂದರ್ಭ ಪಡುಬಿದ್ರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಟಿವಿಎಸ್ ಬೈಕ್ ಸವಾರ ಸುದೀಪ್ ಅತೀವೇಗದಿಂದ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ಪರಿಣಾಮ ವಸಂತ್ ಹಾಗೂ ಸುದೀಪ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ.

ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಾರ್ಕಳ ರೋಟರಿ ಕ್ಲಬ್ ವತಿಯಿಂದ “ದೇವರ ಮಕ್ಕಳೊಂದಿಗೆ ನಮ್ಮ ಸಮಯ” ವಿಶೇಷ ಸೇವಾ ಕಾರ್ಯಕ್ರಮ

Madhyama Bimba

ಸಚ್ಚೇರಿಪೇಟೆಯಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ

Madhyama Bimba

ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ: ವಾರ್ಷಿಕ ಮಹಾರಥೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More