ಕಾರ್ಕಳ

ಸಾಣೂರು ಯುವಕ ಮಂಡಲ ವಾರ್ಷಿಕೋತ್ಸವ

ಕಾರ್ಕಳ: ಸಾಣೂರು ಯುವಕ ಮಂಡಲ 72ನೇ ವಾರ್ಷಿಕೋತ್ಸವ ಹಾಗೂ ಶ್ರೀ ವಾಣಿ ಯಕ್ಷಗಾನ ಸಭಾ ಯುವಕ ಮಂಡಲ ಇದರ 55ನೇ ವಾರ್ಷಿಕೋತ್ಸವವು ಶ್ರೀ ಪಟೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ನಡೆಯಿತು.


ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಅವರು ಯುವಕ ಮಂಡಲದ ಮಹತ್ವಪೂರ್ಣ ಯೋಜನೆಯಾದ ಶಾಶ್ವತ ಆರೋಗ್ಯ ನಿಧಿ ಯೋಜನೆಗೆ ಚಾಲನೆ ನೀಡಿ, ಸಾಣೂರು ಯುವಕ ಮಂಡಲವು ಅನೇಕ ಆದರ್ಶ ಕಾರ್ಯಕ್ರಮಗಳನ್ನು ಹಾಗೂ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತ, ಈ ದಿನ ಆರೋಗ್ಯ ನಿಧಿ ಎಂಬ ಯೋಜನೆಯನ್ನು ಅನುಷ್ಠಾನ ಮಾಡಿ ಸಾಮಾಜಿಕ ಚಟುವಟಿಕೆಗಳಲ್ಲಿ ಕಲಶ ಪ್ರಾಯವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದನ್ನು ಯಶಸ್ವಿಯಾಗಿ ನಿರ್ವಹಿಸಿ ಜನರ ಕಣ್ಣೀರು ಒರೆಸುವಂತಾಗಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ ಇಲ್ಲಿಯ ಆಡಳಿತಧಿಕಾರಿ ಬಾಲಕೃಷ್ಣ ವಹಿಸಿದ್ದರು. ವಾರ್ಷಿಕೋತ್ಸವದ ಉದ್ಘಾಟನೆಯನ್ನು ಡೊಮಿನಿಕ್ ಪಿಂಟೋ ಇವರು ನೇರವೆರಿಸಿದ್ದರು.

ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್, ಎಸ್ ಕೆ ಎಫ್ ಆಡಳಿತ ನಿರ್ದೇಶಕ ಪ್ರಜ್ವಲ್ ಆಚಾರ್, ಡಾ. ಕಾರ್ತಿಕ್ ರಾವ್, ಮೂಡಬಿದ್ರೆ ವಲಯದ ಅರಣ್ಯಧಿಕಾರಿ ಶ್ರೀಧರ್, ಸಾಣೂರು ನರಸಿಂಹ ಕಾಮತ್, ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀರಾಮ್ ಭಟ್, ಡಾ. ಅಜಿತ್ ಪ್ರಕಾಶ್, ದಯಾನಂದ ಶೆಟ್ಟಿ ಸಾಣೂರು ಗುತ್ತು, ಸಾಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧ ಶೆಟ್ಟಿ, ರಾಜೇಶ್ವರಿ ಎಜುಕೇಶನ್ ಫೌಂಡೇಶನ್ ಕಾರ್ಯದರ್ಶಿ ಶ್ವೇತ ಡಿ. ಶೆಟ್ಟಿ, ಉದ್ಯಮಿ , ಉದಯ ಸಾಲ್ಯಾನ್ ಉಪಸ್ಥಿತರಿದ್ದರು.

ದಿ.ಶ್ರೀಧರ್ ಪಾಂಡಿ ಸ್ಮರಣಾರ್ಥ ನೀಡುವ ಈ ವರ್ಷದ ಯಕ್ಷಶ್ರೀ ಪ್ರಶಸ್ತಿಯನ್ನು ಮುರಳೀಧರ ಭಟ್ ಇವರಿಗೆ ನೀಡಿ ಗೌರವಿಸಲಾಯಿತು. ಅದರೊಂದಿಗೆ ಕರಾಟೆ ಮತ್ತು ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಪ್ರಖ್ಯಾತ್ ಪೂಜಾರಿ ಇವರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಶೌಚಾಲಯವನ್ನು ಲೋಕಾರ್ಪಣೆ ಮಾಡಲಾಯಿತು. ಸುಮಾರು 37 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಶಾಶ್ವತ ಆರೋಗ್ಯ ನಿಧಿ ಯೋಜನೆಯಿಂದ 3 ಮಂದಿಗೆ ಸಹಾಯಧನ ಚೆಕ್ ವಿತರಣೆಯನ್ನು ಮಾಡಲಾಯಿತು.

ಯುವಕ ಮಂಡಲದ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮಂಡಲದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪ್ರಕಾಶ್ ರಾವ್ ನೆರವೇರಿಸಿದರು. ಮೋಹನ್ ಶೆಟ್ಟಿ ನಿರೂಪಿಸಿದರು, ಪ್ರಮಿತ್ ಸುವರ್ಣ ವಂದಿಸಿದರು.

Related posts

ಕಾರ್ಕಳ ವಕೀಲರ ಸಂಘದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

Madhyama Bimba

ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಆಹ್ವಾನ

Madhyama Bimba

ಪಡುಕುಡೂರಿನಲ್ಲಿ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More