ಕಾರ್ಕಳ

ಹೆಬ್ರಿ ಗಿಲ್ಲಾಳಿ ಗೋಶಾಲೆಗೆ ಜನರೇಟರ್ ಕೊಡುಗೆ ಹಸ್ತಾಂತರ

ಹೆಬ್ರಿ: ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಗೆ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕೃಷ್ಣನ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ದಾನಿಗಳಾದ ವಿಷ್ಣು ಶರಣ್ ಭಟ್ ಕೊಡಮಾಡಿದ ಗೋಶಾಲೆಗೆ ಅತಿ ಅವಶ್ಯಕತೆಯಿರುವ ಬಹೂಪಯೋಗಿ 30 ಕೆ. ವಿ. ತ್ರೀ ಫೇಸ್ ಸಾಮರ್ಥ್ಯದ ಜನರೇಟರ್‌ನ್ನು ಉಡುಪಿ ಶಾಖೆಯ ಪ್ರತಿನಿಧಿಗಳಾದ ಗುರುಪ್ರಸಾದ್ ರಾವ್ ಮತ್ತು ರಾಘವೇಂದ್ರ ಭಟ್ ಹಸ್ತಾಂತರಿಸಿ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಉಡುಪಿ ಶಾಖಾ ಪ್ರತಿನಿಧಿಗಳನ್ನು ಗೋಶಾಲೆಯ ವತಿಯಿಂದ ಟ್ರಸ್ಟಿಗಳಾದ ರವಿ ರಾವ್ ಗೌರವಿಸಿದರು.
ವಿಷ್ಣುಮೂರ್ತಿ ಆಚಾರ್ಯ, ಸುದರ್ಶನ್ ಕಲ್ಕೂರ್, ಮಂಜುನಾಥ್ ಅಡಿಗ, ನಿತ್ಯಾನಂದ ಭಟ್, ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್ ಉಪಸ್ಥಿತರಿದ್ದರು.


ಗಿಲ್ಲಾಳಿ ಪದ್ಮನಾಭ ಆಚಾರ್ಯ ಶುಭಾಶಂಸನೆಗೈದರು. ಹೆಬ್ರಿಯ ಡಾ. ಭಾರ್ಗವಿ ಐತಾಳ್ ಮಾತನಾಡಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ವಂದಿಸಿದರು.

Related posts

ಕಾರ್ಕಳ: ಬ್ಯಾರಿಕೇಡ್ ಹಸ್ತಾಂತರ

Madhyama Bimba

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3 ಮಂಗಳವಾರದಂದು ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

Madhyama Bimba

ಎನ್‌ಡಿಎ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More