ಮೂಡುಬಿದಿರೆ

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ವಿಜೃಂಭಣೆಯಿಂದ ಜರುಗಿತು.


ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬವನ್ನು ಗಿಡವನ್ನು ನೆಡುವ ಮೂಲಕ ಆಚರಿಸಬೇಕು ಎಂದು ಮುಖ್ಯ ಅತಿಥಿ ಗುರುಮೂರ್ತಿ ಉಪವಲಯ ಅರಣ್ಯಾಧಿಕಾರಿ ಮೂಡುಬಿದ್ರೆಯವರು ಅಭಿಪ್ರಾಯಪಟ್ಟರು.


ಶಾಲಾ ಶಿಸ್ತು, ಪರಿಸರ ಮತ್ತು ಸಂಸ್ಕೃತಿಯ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಸ್ವಯಂ ನಂಬಿಕೆ, ಅವಕಾಶಗಳ ಸದುಪಯೋಗ ಸಾಧನೆಗೆ ದಾರಿ ಎಂದು ಗೌರವಾನ್ವಿತ ಅತಿಥಿ ಶೈಲೇಂದ್ರ ಕುಮಾರ್ ಜೈನ್ ಮಾಲೀಕರು ಸ್ಕೈ ಪೇಂಟ್ಸ್ ಮೂಡಬಿದ್ರೆಯವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ರವರು ಹಿರಿಯರಿಗೆ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಬೆಳೆಸಿಕೊಳ್ಳಬೇಕು ಎನ್ನುತ ಬಹುಮಾನಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ತಿಳಿಸಿದರು. ದೀಪ ಪ್ರಜ್ವಲಿಸುವ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.


ಇದೇ ಸಂದರ್ಭದಲ್ಲಿ ಗುರುಮೂರ್ತಿ ಮತ್ತು ಶೈಲೇಂದ್ರ ಕುಮಾರ್ ಜೈನ್ ನವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಅತಿಥಿಗಳು ವಿತರಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರಾದ ಡಾ. ಬಿ ಪಿ ಸಂಪತ್ ಕುಮಾರ್ ರವರು ಮತ್ತು ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಸ್ವಾತಿ ನಿರೂಪಿಸಿ, ಪ್ರಾಂಶುಪಾಲ ಪ್ರಸಾದ್ ಸ್ವಾಗತಿಸಿ ಶಿಕ್ಷಕಿ ಸ್ವಾತಿ ವಂದಿಸಿದರು.

 

Related posts

  ನಾಳೆ ಮೂಡುಬಿದಿರೆಯಲ್ಲಿ ಪತ್ರಕರ್ತ ರೇಮಂಡ್ ಡಿಕುನಾ ತುಳು ಕೃತಿ ಬಿಡುಗಡೆ

Madhyama Bimba

ವಿಟಿಯು ರಾಜ್ಯ ಮಟ್ಟದ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ-ಆಳ್ವಾಸ್‌ಗೆ ಇಂಜಿನಿಯರ್ ಕಾಲೇಜಿಗೆ ಪ್ರಶಸ್ತಿ

Madhyama Bimba

ಶಿರ್ತಾಡಿಯಲ್ಲಿ ಯೂನಿಯನ್ ಬ್ಯಾಂಕ್ ಹಣಕಾಸು ಸಾಕ್ಷರತಾ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More