Blog

ನಲ್ಲೂರು ಗೋ ಕಳ್ಳತನ – ಶಿವಪ್ರಸಾದ್ ಬಂಧನ

ನಲ್ಲೂರುವಿನಲ್ಲಿ ಕಳೆದ 1 ತಿಂಗಳ ಹಿಂದೆ ನಡೆದ ಗೋ ಹತ್ಯೆ ಪ್ರಕರಣದಲ್ಲಿ ಗೋ ಹತ್ಯೆ ಮಾಡಿದವರಿಗೆಗೋವನ್ನು ಪೂರೈಕೆ ಮಾಡಿದ ಶಿವಪ್ರಸಾದ್ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ನವೆಂಬರ್ 10 ರಂದು ಅಶ್ರಫ್ ಎಂಬಾತನ ಮನೆಯಲ್ಲಿ ಗೋ ಹತ್ಯೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಎಸ್ ಐ ಪ್ರಸನ್ನ ನೇತೃತ್ವದಲ್ಲಿ ಅಲ್ಲಿಗೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಸುಮಾರು 98 ಕೆ ಜಿ ಮಾಂಸವನ್ನು ಅಲ್ಲಿ ಮಾರಾಟಕ್ಕಾಗಿ ಇರಿಸಲಾಗಿತ್ತು.

ಪಟ್ಟು ಬಿಡದ ಪೊಲೀಸರು ಈ ಪ್ರಕರಣದಲ್ಲಿ ಆಶ್ರಫ್ ಹಾಗೂ ಅವನ ಮನೆಯವರ ಮೇಲೆ ಕೇಸು ದಾಖಲಿಸಿದ್ದರು.

ಇಂದು ಬಂದಿತನಾದ ಶಿವ ಪ್ರಸಾದ್ ಕುಡಿತದ ಚಟ ಹೊಂದಿದ್ದು ಅದಕ್ಕಾಗಿ ಇಂತಹ ಕೆಟ್ಟ ಕೆಲಸಕ್ಕೆ ತೊಡಗಿಸಿ ಕೊಂಡಿದ್ದ ಎನ್ನಲಾಗಿದೆ.  ಆತ ಒಬ್ಬಂಟಿಯಾಗಿ ತಿರುಗಾಟ ಮಾಡುತ್ತಿದ್ದು ಯಾರೊಂದಿಗೂ, ಯಾವ ಸಂಘಟನೆಯೊಂದಿಗೂ ಸಂಪರ್ಕ ಇಟ್ಟು ಕೊಂಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಿಂದೂ ಸಂಘಟನೆಗಳ ಸಂಪರ್ಕ ಇತ್ತೇ?

ಈ ಮಧ್ಯೆ ಶಿವ ಪ್ರಸಾದ್ ಹಿಂದೂ ಸಂಘಟನೆಗಳ ಕಾರ್ಯಕರ್ತ ಎಂಬ ಮಾಹಿತಿ ಎಲ್ಲೆಡೆ ಹರಿದಾಟ ಮಾಡುತ್ತಿದೆ.

ಈ ವಿಚಾರ ಬಗ್ಗೆ ನಲ್ಲೂರಿನ ಆಪತ್ಬಾಂಧವ ಎಂದೇ ಗುರುತಿಸಿ ಕೊಂಡಿರುವ ಸುಮಿತ್ ಬಳಿ ಈ ಬಗ್ಗೆ ಮಾಹಿತಿ ಕೇಳಿದಾಗ ಅವರು ಆ ವ್ಯಕ್ತಿ ಯಾವುದೇ ಸಂಘಟನೆಗಳಲ್ಲಿ ಇಷ್ಟರವರೆಗೆ ಗುರುತಿಸಿ ಕೊಂಡಿಲ್ಲ. ಕಳ್ಳತನ ಮಾಡುವವರು ಹಿಂದೂ ಸಂಘಟನೆಗಳ ಹತ್ತಿರ ಬರೋದು ಬಿಡಿ, ಹೆಸರು ಹೇಳಲೇ ಇಚ್ಛೆಸೋಲ್ಲ. ಇನ್ನು ಸದಸ್ಯ ಆಗೋದು ಸಾಧ್ಯವೇ ಇಲ್ಲ ಎಂದಿದ್ದಾರೆ

Related posts

ಪಾಜಗುಡ್ಡೆ ಶ್ರೀ ಸತ್ಯ ಸಾರಮಣಿ ಪೂಜಾ ಸಮಿತಿ

Madhyama Bimba

ಸ.ಹಿ.ಪ್ರಾ.ಶಾಲೆ ಬಸ್ರಿ ಬೈಲೂರು: ಉದಯೋತ್ಸವ ಸಮಿತಿ ಪುನರಚನೆ ಅಧ್ಯಕ್ಷರಾಗಿ ಪ್ರಶಾಂತ್ ಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಶಿಶಿರ್ ಶೆಟ್ಟಿ

Madhyama Bimba

ಪತ್ರಕರ್ತರ ಸಮಸ್ಯೆ ಪರಿಹಾರ – ಮುಖ್ಯಮಂತ್ರಿಗಳ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More