Blog

ಯಸಳೂರು ವ್ಯಾಪ್ತಿಯ ವ್ಯಕ್ತಿ ಬಣಕಲ್ ನಲ್ಲಿ ಕೊಲೆ –

ನವೆಂಬರ್ 16. 2025 ರ ಚಿಕ್ಕಮಗಳೂರು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಘಟನೆ

ಕೆಲಸಕ್ಕೆಂದು ಕರೆದುಕೊಂಡು ಹೋಗಿ ದಿನೇಶ್ ಕುಲಾಲ್ ರವರಿಗೆ ಗುಂಡು ಹೊಡೆದು ಕೊಲೆ ಆಗಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ

ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಯಸಳೂರು ಪೊಲೀಸ್ ಠಾಣೆ  ವ್ಯಾಪ್ತಿಯ  ಈಚಲ ಬೀಡು ಗ್ರಾಮದ  ವ್ಯಕ್ತಿ  ಶೂಟ್ ಔಟ್ ಆಗಿ ಕೊಲೆಯಾಗಿರುವ ವಿಷಯ  ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ಇಲ್ಲ  ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ಕಾನೂನು ಬಾಹಿರ ಕೆಲಸಗಳು  ನಡೆದರೂ ಸಹ ಇಲಾಖೆ ಗಮನಕ್ಕೆ ಬಾರದೆ ಹೋದರೆ ಜನಸಾಮಾನ್ಯರ ಪರಿಸ್ಥಿತಿಗಳು ಹೇಗೆ ? ಎಂದು ಜನರಾಡಿ ಕೊಳ್ಳುತ್ತಿದ್ದಾರೆ.

ವ್ಯಕ್ತಿ ಸಾಮಾನ್ಯ ಮರಣ ಹೊಂದಿದ್ದಾರೆ ಅದರ ಮಾಹಿತಿ ಪಡೆಯುವುದು ಬೇಡ

ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೇಶೂಟ್  ಔಟ್ ಪ್ರಕರಣ ಆಗಿರುವುದರಿಂದ   ವ್ಯಕ್ತಿಯ ಮೂಲ ವಿಳಾಸದ  ಪೊಲೀಸ್ ಠಾಣೆಗೆ  ಮಾಹಿತಿ ಒದಗಿಸಬೇಕಾಗಿರುವುದು  ಇಲಾಖೆಯ ಕರ್ತವ್ಯ ಅಲ್ಲವೇ?

ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಇಲಾಖೆಯೇ  ಎಚ್ಚರ ತಪ್ಪಿದರೆ  ಜನಸಾಮಾನ್ಯರ  ಪರಿಸ್ಥಿತಿ ಹೇಗೆ?

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಯಸಳೂರು
ಹೋಬಳಿಯ ಈಚಲಬಿಡು ಗ್ರಾಮದ ವ್ಯಕ್ತಿ ಯನ್ನೂ
ಕೆಲಸಕ್ಕೆಂದು ಕರೆದುಕೊಂಡು ಹೋಗಿ ಗುಂಡು ಹೊಡೆದು ಕೊ*ಮಾಡಲು ಯತ್ನಿಸಿದ ಘಟನೆ ದಿನಾಂಕ ನ.16 ರಂದು ಬಣಕಲ್ ಪೊಲೀಸ್ ಠಾಣಾ   ವ್ಯಾಪ್ತಿಯಲ್ಲಿ ನಡೆದಿದೆ.

47 ವರ್ಷದ ಗಾಯಳು ದಿನೇಶ್ ಕುಲಾಲ್ ರವರನ್ನು ಮಂಗಳೂರಿನ ಕೆ ಎಸ್ ಹೆಗ್ಗಡೆ  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೃತ ದಿನೇಶ್ ಕುಲಾಲ್ ರವರ ಮಗ ಜೀವನ್ ಬಣಕಲ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ ತಿಳಿದು ಬಂದಿದೆ.

ಘಟನೆ ವಿವರ

ಸೃಜನ್ ಶುಂಟಿಕೊಪ್ಪ ಎಂಬುವವರು ದಿನಾಂಕ ನ.16ರಂದು ಸಬ್ಟೇನಹಳ್ಳಿ ಎಸ್ಟೇಟ್ ಗೆ ದಿನೇಶ್ ಕುಲಾಲ್ ರವರನ್ನು ಮಹೇಂದ್ರ ಬೊಲೆರೋ ವಾಹನದಲ್ಲಿ ಕರೆದುಕೊಂಡು ಬಂದು, ದಿನಾಂಕ ನ.22ರಂದು ಸಂಜೆ 6ರಿಂದ 7ಗಂಟೆ ಸುಮಾರಿಗೆ ಮೃತ ದಿನೇಶ್ ರವರ ಮಗಳ ದೂರವಾಣಿ ಸಂಖ್ಯೆ ಗೆ ಕರೆ ಮಾಡಿ ಇವತ್ತು ಮಧ್ಯಾಹ್ನ 12:30 ಸುಮಾರಿಗೆ ನಿಮ್ಮ ತಂದೆಗೆ ಸ್ಟ್ರೋಕ್ ಆಗಿದೆ ಎಂದು ಸುಳ್ಳು ಮಾಹಿತಿ ನೀಡಿ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆಸಿಕೊಂಡಿರುತ್ತಾರೆ.


ಅಲ್ಲಿ ನಮ್ಮ ತಂದೆಯನ್ನು ನೋಡಿದಾಗ ಅವರ ಕುತ್ತಿಗೆಯಿಂದ ಭಾರೀ ರಕ್ತ ಸ್ರಾವ ಆಗಿದ್ದನ್ನು ಕಂಡು ನಾನು(ಮೃತ ದಿನೇಶ್ ಕುಲಾಲ್ ರವರ ಮಗ ಜೀವನ್) ಸೃಜನ್ ರವರಿಗೆ ಹೇಳಿದಾಗ ಸೃಜನ್ ರವರು ಕೆ ಎಂ ಸಿ ಆಸ್ಪತ್ರೆಗೆ ತಂದೆಯನ್ನು ದಾಖಲಿಸಿದೆವು. ನಂತರ ಆರೋಗ್ಯದಲ್ಲಿ ಏರುಪೇರಾದ ಕಾರಣ ವೈದ್ಯರನ್ನು ಕೇಳಿದಾಗ ಅವರಿಗೆ ಏರ್ ಗನ್ ನಿಂದ ಶೂಟ್ ಮಾಡಿರುವುದಾಗಿ ಹಾಗೂ ಗಂಟಲಿನಲ್ಲಿ ಬುಲೆಟ್ ಇರುವುದು ಧೃಡಪಡಿಸಿದರು. ಎಂದು ಅವರ ಮಗ ಪೊಲೀಸ್ ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ


ನಂತರ ಸೃಜನ್ ರವರನ್ನು ಏನಾಯಿತೆಂದು ಪ್ರಶ್ನಿಸಿದಾಗ ನಾನಾತರಹ ಸುಳ್ಳು, ಮಾಹಿತಿ ನೀಡಿ ನಮ್ಮನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಅವರ ನಡೆಯಲ್ಲಿ ಉದ್ದೇಶ ಪೂರ್ವಕವಾಗಿ ಕೊಲೆ ಪ್ರಯತ್ನ ಮಾಡಿರುತ್ತಾರೆಂದು ನನಗೆ ಅನುಮಾನವಿದೆ. ಈ ಘಟನೆಗೆ ಸಂಬಂಧಿಸಿದಂತೆ ನನ್ನ ತಂದೆಯನ್ನು ಕೆಲಸಕ್ಕೆ ಕರೆದುಕೊಮಡು ಹೋದ ಸೃಜನ್ ಹಾಗೂ ಅವರ ಸ್ನೇಹಿತ ವಿಘ್ನೇಶ್ ಮತ್ತು ಅವರ ಸ್ನೇಹಿತರು ಹಾಗೂ ತೋಟದ ಮಾಲಿಕರು ಈ ಕೃತ್ಯದಲ್ಲಿ ಭಾಗಿ ಆಗಿರುವುದು ನಮಗೆ ಅನುಮಾನವಿದೆ, ಆದುದರಿಂದ ಅದರ ಮೇಲೆ ಸೂಕ್ತ ಕಾನೂನು ಕ್ರಮ ಕೋಗೊಳ್ಳಬೇಕಾಗಿ ಕೋರಿ ಪೋಲಿಸ್ ದೂರನ್ನು ಮೃತ ದಿನೇಶ್ ಕುಲಾಲ್ ರವರ ಮಗ ನೀಡಿದರು. ಈ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆತಿಳಿದು ಬಂದಿದೆ.

ಯಸಳೂರು ಹೋಬಳಿಯ ಈಚಲ ಬಿಡು ಗ್ರಾಮದಲ್ಲಿ ಶವಸಂಸ್ಕಾರ ಮಾಡಲಾಗಿದೆ
ಆದರೆ ನಮ್ಮ ಸ್ಥಳೀಯ ಠಾಣೆಗೆ ಮನೆಯವರಿಂದಲಾಗಲಿ ಅಥವಾ  ಮೂಡಿಗೆರೆಯ ಬಣಕಲ್ ಪೊಲೀಸ್ ಠಾಣೆಯಿಂದಲೂ ಸಹ
ಸಕಲೇಶಪುರಕ್ಕೆ ಸಂಬಂಧಪಟ್ಟಂತೆ  
ಪೊಲೀಸ್ ಇಲಾಖೆಗೆ  ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ..

Related posts

ಶಗುನ್ ಎಸ್ ವರ್ಮ ಹೆಗ್ಡೆಯವರಿಗೆ ಕಾರ್ಕಳ ಜೈನ ಮಠದಿಂದ ಸನ್ಮಾನ

Madhyama Bimba

ವಿನಯ ಹೆಗ್ಡೆ ನಿಧನ

Madhyama Bimba

ರತನ್ ಟಾಟಾ ಶ್ರದ್ಧಾಂಜಲಿ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More