Blog

ಕಳ್ಳತನ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಿ

ವರ್ತಕರು ಕಾಫಿ,ಏಲಕ್ಕಿ,ಮೆಣಸು ಕಳ್ಳತನ ಪ್ರಕರಣಗಳು ನಡೆಯದಂತೆ ಮುಂಜಾಗ್ರತಾಕ್ರಮವನ್ನು  ಅನುಸರಿಸಿ.:-  ಡಿವೈಎಸ್ಪಿ  ಮಾಲತೀಶ ಎಸ್ .ಕೆ


ಸಕಲೇಶಪುರ :- ಇತ್ತೀಚಿನ ದಿನಗಳಲ್ಲಿ ಕಾಫಿ ಬೆಲೆಯಲ್ಲಿ ಏರಿಕೆ ಇರುವುದರಿಂದ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳೆಗಾರರು ಹಾಗೂ ವರ್ತಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕಳ್ಳತನ ಪ್ರಕರಣಗಳನ್ನು  ಕಡಿಮೆ ಮಾಡಬೇಕು ಎಂದು ಸಕಲೇಶಪುರ ಪೊಲೀಸ್ ಉಪ ಆಧೀಕ್ಷಕರಾದ ಮಾಲತೀಶ ಎಸ್ .ಕೆ ಹೇಳಿದರು


ಗ್ರಾಮಾಂತರ ಠಾಣೆ ಸಕಲೇಶಪುರದಲ್ಲಿ  ಕರ್ನಾಟಕ ರಾಜ್ಯ ಪೊಲೀಸ್, ಸಕಲೇಶಪುರ ಪೊಲೀಸ್ ಉಪಾಧೀಕ್ಷಕ  ಸಂಯೋಗದಲ್ಲಿ ಕಾಫಿ ವರ್ತಕರ ಸಭೆ  2025 ಯನ್ನು ಹಮ್ಮಿಕೊಳ್ಳಯಾಗಿತ್ತು. ಸಭೆಯಲ್ಲಿ  ಬೆಳೆಗಾರರಿಗೆ  ಮತ್ತು ವರ್ತಕರಿಗೆ ಕಾಫಿ,ಏಲಕ್ಕಿ,ಮೆಣಸು ಕಳ್ಳತನ ಪ್ರಕರಣಗಳು ನಡೆಯದಂತೆ  ಮುಂಜಾಗೃತಕ್ರಮದ ಬಗ್ಗೆ  ಸೂಚನೆ ನೀಡಿದರು.

ವರ್ತಕರು ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ಬಳಿ ಜಮೀನಿನ ಆರ್‌ಟಿಸಿ ಪಡೆದುಕೊಳ್ಳಬೇಕು,ಹಾಗೂ ತಮ್ಮ ಅಂಗಡಿಗಳಲ್ಲಿ ಅಂಗಡಿಯ ಒಳ ಬಾಗ ಮತ್ತು ಅಂಗಡಿ ಮುಂಬಾಗ ಹಾದುಹೋಗಿರುವ ರಸ್ತೆಯ ದೃಶ್ಯಗಳು ಕಾಣುವ ಹಾಗೆ ಸಿಸಿ ಕ್ಯಾಮೆರಗಳನ್ನು ಕಡ್ಡಾಯವಾಗಿ ಆಳವಡಿಸಿ ಕನಿಷ್ಟ 03 ತಿಂಗಳ ಬ್ಯಾಕ್ ಅಪ್ ಇಟ್ಟುಕೊಳ್ಳುಬೇಕು ಮತ್ತು ಅಂಗಡಿಗಳಲ್ಲಿ ಒಂದು ರಿಜಿಸ್ಟರ್ ಇಟ್ಟು ಅದರಲ್ಲಿ ಪ್ರತಿ ದಿನ ಅವರ ಬಳಿಗೆ ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ವಿಳಾಸ,ಮೊಬೈಲ್ ನಂಬರ್ ಹಾಗೂ ಅವರಿಂದ ಖರೀದಿಸಿದ ಕಾಫಿಯ ವಿವರವನ್ನು ನಮೂದು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಅನುಮಾನಸ್ಪದ ವ್ಯಕ್ತಿಗಳು ಕಾಫಿ,ಏಲಕ್ಕಿ,ಮೆಣಸು ಮಾರಲು ಬಂದಾಗ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು, ವರ್ತಕರು ಹಾಗೂ ಬೆಳೆಗಾರರು ಮುಂಜಾಗ್ರತಾಕ್ರಮವನ್ನು ವಹಿಸುವ ಮೂಲಕ  ಕಳ್ಳತನ ಕಡಿಮೆ ಮಾಡಬಹುದು.ಇದಕ್ಕೆ ತಮ್ಮೆಲ್ಲರ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ರಾತ್ರಿ ಗಸ್ತಿನ ವೇಳೆ ಅನುಮಾನಸ್ಪದವಾಗಿ ಓಡಾಡುವ ಮಾರುತಿ 800 ಕಾರು,ಓಮಿನಿ ಕಾರು. ಗೂಡ್ಸ್ ಆಟೋಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಬೀಟ್‌ ಸಿಬ್ಬಂದಿ ಮತ್ತು ರಾತ್ರಿ ರೌಂಡ್ಸ್ ಅಧಿಕಾರಿಗಳಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಯಸಳೂರು ಠಾಣೆ ಪಿ.ಎಸ್.ಐ ಸಲ್ಮಾನ್ ಖಾನ್ ತಂಬುಳ್ಳಿ, ನಗರ  ಠಾಣೆ ಇನ್ಸ್ಪೆಕ್ಟರ್ ವನರಾಜ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಕುಮಾರ್  ಸೇರಿದಂತೆ ಹೆಚ್ಚಿನ ಸಂಖ್ಯೆಯ ವರ್ತಕರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು .

Related posts

ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕಳ್ಳತನ ಇಬ್ಬರ ಬಂಧನ

Madhyama Bimba

ಮಾಳ ಶ್ರೀ ಗುರುಕುಲ ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವದ ಸಂಭ್ರಮ

Madhyama Bimba

ಸರಕಾರಿ ನೌಕರರ ಸಂಘದ ಚುನಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More