ಕಾರ್ಕಳ

ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಅಧ್ಯಕ್ಷರ ಭೇಟಿ

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಮೈಸೂರು ಇವರು ಪ್ರಾಧಿಕಾರದ ವಿವಿಧ ಯೋಜನೆಗಳಾದ “ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅದರಂತೆ ಇಂದು ಶ್ರೀ ಮಹಾವೀರ ಕಾಲೇಜಿಗೆ ಭೇಟಿ ನೀಡಿದರು. ಅವರೊಂದಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಆಪ್ತ ಕಾರ್ಯದರ್ಶಿ ಪ್ರೊ. ಶ್ರೀನಿವಾಸರವರು ಭಾಗವಹಿಸಿದ್ದರು.

ಇವರನ್ನು ಕಾಲೇಜಿನ ಆಡಳಿತಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಬರಮಾಡಿಕೊಂಡು ಕರ್ನಾಟಕದ ಮನೆ ಗ್ರಂಥಾಲಯದ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಅವರು ಕಾಲೇಜಿನ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳನ್ನು ವೀಕ್ಷಿಸಿ ಗ್ರಂಥಾಲಯದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.

Related posts

ನಾಡದೊರೆ ಸಿದ್ಧರಾಮಯ್ಯ ನವರ ಚಿತ್ರ ಬಿಡಿಸಿ ಹಸ್ತಾಂತರಿಸಿದ ಯಶೋಧ ಆಚಾರ್ಯ ನೀರೆ ಬೈಲೂರು 

Madhyama Bimba

ಕೆರೆಬೆಟ್ಟು ಶಾಲೆಯಲ್ಲಿ ನೋಟ್ಸ್ ಪುಸ್ತಕ ವಿತರಣೆ

Madhyama Bimba

ಮುದ್ರಾಡಿ ಮೇಲ್ಬೆಟ್ಟು ಮದಗ ಅಭಿವೃದ್ಧಿ ಕಾರ್ಯವನ್ನು ವೀಕ್ಷಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More