ಕಾರ್ಕಳ

ಕಾರ್ಕಳ: ಕಾರಿಗೆ ಅಟೋರಿಕ್ಷಾ ಡಿಕ್ಕಿ- ರಿಕ್ಷಾ ಪ್ರಯಾಣಿಕ ಮೃತ್ಯು

ಕಾರ್ಕಳ: ಮುಂಡ್ಕೂರು ಜಾರಿಗೆಕಟ್ಟೆಯ ಬಳಿ ಕಾರಿಗೆ ಅಟೋರಿಕ್ಷಾ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ಪ್ರಯಾಣಿಕ ಗಂಭೀರ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಮೇ. 29ರಂದು ನಡೆದಿದೆ.

ಅಟೋ ರಿಕ್ಷಾ ಚಾಲಕ ಮಹಮ್ಮದ್ ಕೈಫ್‌ರವರು ಸಚ್ಚೇರಿಪೇಟೆಯಿಂದ ಜಾರಿಗೆಕಟ್ಟೆ ಕಡೆಗೆ ಪ್ರಯಾಣಿಕ ಶ್ರೀಕಾಂತ್‌ರನ್ನು ಕುಳ್ಳಿರಿಸಿಕೊಂಡು ಅತೀವೇಗದಿಂದ ಚಲಾಯಿಸಿಕೊಂಡು ಬಂದು ಮುಂಡ್ಕೂರಿನಿಂದ ಸಚ್ಚೇರಿಪೇಟೆ ಕಡೆಗೆ ಹೋಗುತ್ತಿದ್ದ ಅನಂತ ಪದ್ಮನಾಭ ಆಚಾರ್ಯರವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾ ಮಗುಚಿ ಬಿದ್ದು, ಅಟೋ ಚಾಲಕ ಗಾಯಗೊಂಡು, ರಿಕ್ಷಾದಲ್ಲಿದ್ದ ಶ್ರೀಕಾಂತ್ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಕಿನ್ನಿಗೋಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅಜೆಕಾರು: ಇಲಾಖಾ ಅನುಮತಿಯಿಲ್ಲದೆ ಅಪರಿಚಿತರಿಂದ ರಸ್ತೆಯ ಭಾಗದಲ್ಲಿ ಅಗೆತ-ವಾಹನ ಸಂಚಾರಕ್ಕೆ ತೊಂದರೆ

Madhyama Bimba

ಕ್ರಿಯೇಟಿವ್ ಕಾಲೇಜು ವಾರ್ಷಿಕೋತ್ಸವ

Madhyama Bimba

ಕಾನೂನು ಪದವೀಧರರಿಗೆ ಶಿಷ್ಯವೇತನ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More