ಕಾರ್ಕಳ

ಕಾರ್ಕಳ: ಅಕ್ರಮ ಮರಳು ಸಾಗಾಟ – ಕೇಸು ದಾಖಲು

ಕಾರ್ಕಳ: ಅತ್ತೂರು ಚರ್ಚ್ ದ್ವಾರದ ಬಳಿ ಬಂಗ್ಲೆಗುಡ್ಡೆ ಕಡೆಯಿಂದ ಪುಲ್ಕೇರಿ ಕಡೆಗೆ ಪರವಾನಿಗೆ ಹೊಂದದೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿ ಪ್ರಕರಣ ದಾಖಲಿಸಿದ ಘಟನೆ ಜ. 05ರಂದು ವರದಿಯಾಗಿದೆ.


ವಿನ್ಸೆಂಟ್ ಎಂಬಾತನು ಬ್ರಹ್ಮಾವರ ತಾಲೂಕಿನ ಚೆರ್ಕಾಡಿ ಇರ್ಮುಗೋಡು ಎಂಬಲ್ಲಿರುವ ಸರಕಾರಿ ಹೊಳೆಯಿಂದ ಅಕ್ರಮವಾಗಿ ಕಳವು ಮಾಡಿ ದಾಸ್ತಾನು ಇರಿಸಿದ ಮರಳನ್ನು ಮಾಲೀಕ ಮಹಮ್ಮದ್ ಇರ್ಫಾನ್ ತಿಳಿಸಿದಂತೆ ಟಿಪ್ಪರ ಲಾರಿಯ ಚಾಲಕ ಸಮ್ಯೇಗ್ದ್ ಜೈನ್ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಟಿಪ್ಪರ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮುರಳಿಧರ್ ನಾಯ್ಕ್‌ರವರಿಗೆ ದಾಳಿ ನಡೆಸಿ ಟಿಪ್ಪರ ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡಿದ್ದಾರೆ.


ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಾರ್ಕಳ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟಿ ಕಳವು

Madhyama Bimba

ಕಾರ್ಕಳ: ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿ- ಗಾಯ

Madhyama Bimba

ಅಜೆಕಾರು: ಇಲಾಖಾ ಅನುಮತಿಯಿಲ್ಲದೆ ಅಪರಿಚಿತರಿಂದ ರಸ್ತೆಯ ಭಾಗದಲ್ಲಿ ಅಗೆತ-ವಾಹನ ಸಂಚಾರಕ್ಕೆ ತೊಂದರೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More