ಹೊಸಬೆಟ್ಟು ಸೇವಾ ಸಹಕಾರ ಸಂಘದಲ್ಲಿ 2015- 16 ರಲ್ಲಿ ನಡೆದ ಹಣ ದುರುಪಯೋಗದ ಪ್ರಕರಣದಲ್ಲಿ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಯಪ್ಪ ಹಾಗೂ ಸ್ವಸಹಾಯ ಗುಂಪುಗಳ ಪ್ರೇರಕಿಯಾಗಿದ್ದ ಶಕೀಲಾ ಅಶೋಕ್ ಅವರಿಗೆ ಮರುಪಾವತಿಸಲು ನ್ಯಾಯಾಲಯ ಆದೇಶಿಸಿದೆ. ದುರುಪಯೋಗದ ಹಣಕ್ಕೆ ಬಡ್ಡಿ ಸಮೇತ ಪಾವತಿಸಲು ಸಹಕಾರ ಸಂಘಗಳ ನ್ಯಾಯಾಲಯವು ಆದೇಶಿಸಿದೆ.

ಶಕೀಲಾ ಅಶೋಕ್ ಮತ್ತು ಹರಿಯಪ್ಪ ಅವರು ಸೇರಿಕೊಂಡು ಸ್ವಸಹಾಯ ಗುಂಪುಗಳ ಹೆಸರಿನಲ್ಲಿ ಸಾಲದ ರೀತಿಯಲ್ಲಿ ಹಣ ಪಡೆದು ಸಂಘದ ಹಣ ದುರುಪಯೋಗ ನಡೆಸಿದ್ದರು. ಇದು 2015- 16 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂಡಿತ್ತು. ಅವರಿಬ್ಬರ ವಿರುದ್ಧ ಸಹಕಾರ ಸಂಘಗಳ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು.

ಅಂದು ದುರುಪಯೋಗವಾಗಿದ್ದ ಒಟ್ಟು ಹಣ 11,75,339 ಆಗಿತ್ತು.
ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ಹಣಕ್ಕೆ ಬಡ್ಡಿ ಸಮೇತ ಮರು ಪಾವತಿಸಲು ಇಬ್ಬರಿಗೂ ಆದೇಶಿಸಿದೆ.ಒಂದುವೇಳೆ ಈ ಮೊತ್ತವನ್ನು ಪಾವತಿಸಲು ವಿಫಲರಾದಲ್ಲಿ ಇವರಿಬ್ಬರ ಚರ ಯಾ ಸ್ಥಿರಾಸ್ತಿಯನ್ನು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಿ ವಸೂಲು ಮಾಡಲು ಹೊಸಬೆಟ್ಟು ಸಹಕಾರ ಸಂಘಕ್ಕೆ ನ್ಯಾಯಾಲಯವು ಆದೇಶಿಸಿದೆ.
