ಕಾರ್ಕಳ

ಕಾರ್ಕಳ: ಸ್ಕೂಟಿಗೆ ಆಟೋರಿಕ್ಷಾ ಡಿಕ್ಕಿ

ಕಾರ್ಕಳ: ಕಾರ್ಕಳ ಎಸ್‌ವಿಟಿ ಸರ್ಕಲ್ ಬಳಿ ಸ್ಕೂಟಿಗೆ ಆಟೋರಿಕ್ಷಾ ಡಿಕ್ಕಿಯಾದ ಘಟನೆ ಜ. ೧೪ರಂದು ವರದಿಯಾಗಿದೆ.


ಸ್ಕೂಟಿ ಸವಾರ ರವಿಕಾಂತ್ ಕಾಮತ್ (60) ಹಾಗೂ ಆಟೋರಿಕ್ಷಾ ಪ್ರಯಾಣಿಕರಾದ ರಜಿನಿ ಗಾಯಗೊಂಡವರು.

ಆಟೋರಿಕ್ಷಾ ಚಾಲಕ ದಾಮೋದರ್ ಮಣೀಯಾಣಿ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ಪರಿಣಾಮ ರವಿಕಾಂತ್‌ರವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಆಟೋರಿಕ್ಷಾ ಇವರ ಮೇಲೆ ಪಲ್ಟಿ ಹೊಡೆದು ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಇವರು ಚಿಕಿತ್ಸೆಗಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮರಿಯಡ್ಕ ರಮೇಶ್ ಶೆಟ್ಟರ ಶ್ರೀ ಮಿಜಾರು ಕ್ಷೇತ್ರ ಮಹಾತ್ಮೆ ಯಕ್ಷ ಪ್ರಸಂಗ ಲೋಕಾರ್ಪಣೆಗೆ ಸಿದ್ಧತೆ

Madhyama Bimba

ದೊಂಡೇರಂಗಡಿ ದಿ. ಯತೀಶ್ ಶೆಟ್ಟಿ ಸ್ಮರಣಾರ್ಥ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

Madhyama Bimba

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More