ಕಾರ್ಕಳ

ಕಾರ್ಕಳ: ಮಾದಕ ದ್ರವ್ಯ ವಿರೋಧಿ ಜಾಥಾ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್ ಕಾರ್ಕಳ, ಜೇಸಿಐ ಕಾರ್ಕಳ, ವಿಜೇತ ವಿಶೇಷ ಶಾಲೆ ಇದರ ಸಹಯೋಗದಲ್ಲಿ ವಿಜೇತ ಶಾಲೆಯಿಂದ ಬಂಡಿ ಮಠ ಬಸ್ ನಿಲ್ದಾಣದವರೆಗೆ ನಡೆದ ಮಾದಕ ದ್ರವ್ಯ ವಿರೋಧಿ ಜಾಥಾ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷರಾದ ನವೀನ್ ಶೆಟ್ಟಿ ನೆರವೇರಿಸಿ ಜಾಥಾಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಕಾರ್ಕಳದ ಅಧ್ಯಕ್ಷರಾದ ಅವಿನಾಶ್ ಜಿ ಶೆಟ್ಟಿ ವಹಿಸಿ ಅಧ್ಯಕ್ಷೀಯ ನುಡಿಗಳೊಂದಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕಾರ್ಕಳದ ಸಮಾಜ ಹಿತ ಚಿಂತಕರಾದ ಸಮದ್ ಖಾನ್, ಉದ್ಯಮಿಗಳಾದ ವೃಷಭರಾಜ ಜೈನ್, ರೋಟರಿ ಸೇವಾ ಯೋಜನೆಯ ವಸಂತ್ ಎಂ, ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷರಾದ ಸುಭಿತ್ ಎನ್. ಆರ್, ಸಮಾಜ ಸೇವಕಿ ಶೋಭಾ ಭಾಸ್ಕರ್, ವಿಜೇತ ವಿಶೇಷ ಶಾಲಾ ಸ್ಥಾಪಕರಾದ ಡಾ. ಕಾಂತಿ ಹರೀಶ್ , ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಪ್ರೊ.ಚಂದ್ರಕಾಂತ್ ಶೆಣೈ , ಪ್ರೊ.ರೇಣುಕಾ ಎಚ್. ಜಿ ಉಪಸ್ಥಿತರಿದ್ದರು.

ಎನ್ ಎಸ್ ಎಸ್ ವಿದ್ಯಾರ್ಥಿಗಳಾದ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ಹುಲಿಗೇಶ್ ಸ್ವಾಗತಿಸಿ, ಆದರ್ಶ ವಂದಿಸಿದರು.

Related posts

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶ್ರೀರಾಮ ತಾರಕ ಜಪಯಜ್ಞ

Madhyama Bimba

ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸನ್ಮಾನ

Madhyama Bimba

ನಿಟ್ಟೆಯ ಯುವತಿ ಕಾಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More