Blog

ಮಿಯ್ಯಾರುನಲ್ಲಿ ಭೀಕರ ರಸ್ತೆ ಅಪಘಾತ – ರಸ್ತೆ ಸಮಸ್ಯೆ – ಹೋರಾಟದ ಎಚ್ಚರಿಕೆ ನೀಡಿದ ಶೇಕ್ ಶಬೀರ್

ಕಾರ್ಕಳದ ಮಿಯಾರಿನಲ್ಲಿ ನಡೆದ ರಸ್ತೆ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ಉಪವಿಭಾಗ ನೇರ ಹೊಣೆ  –

ಹೋರಾಟದ ಎಚ್ಚರಿಕೆ ನೀಡಿದ ಶೇಕ್ ಶಬೀರ್

ರಾಷ್ಟ್ರೀಯ ಹೆದ್ದಾರಿ 169 ಮಾಳ ಗೇಟಿನಿಂದ ಕಾರ್ಕಳ ಕ್ಕೆ ಚತುಷ್ಪಥ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆದು, ಕಾಮಗಾರಿ ಆರಂಭಿಸಿ 2ವರ್ಷ ಕಳೆದರೂ ಕೂಡಾ ಖಾಸಗಿ ಭೂ ಸ್ವಾಧೀನ ಪ್ರಕ್ರಿಯೆ ಸಂಭಂದಿಸಿದಂತೆ ಯಾವುದೇ ಕ್ರಮ ಕೈಗೊಲ್ಲದೆ, ಸೂಕ್ತ ಪರಿಹಾರ ನೀಡದೇ ಇರುವುದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳಿಗೆ ಬೇಜವಾಬ್ದಾರಿ ಕೈಗನ್ನಡಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶೇಕ್ ಶಬೀರ್ ತಿಳಿಸಿದ್ದಾರೆ.

ಈ ರಸ್ತೆಯಲ್ಲಿ ದಿನಂಪ್ರತಿ ಅಪಘಾತ ನಡೆದು ನೂರಾರು ಜೀವಗಳು ಬಲಿಯಾಗುತ್ತಿದೆ. ರಸ್ತೆ ಕಾಮಗಾರಿ ಸಮಸ್ಯೆ ಯಿಂದಾಗಿ ವಾಹನ ಚಾಲಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ.

ನಿರಂತರ ಜೀವ ಹಾನಿ ಆಗುತ್ತಿದ್ದರೂ ಕೂಡಾ ರಾಷ್ಟೀಯ ಹೆದ್ದಾರಿ ಅಧಿಕಾರಿಗಳು ಇನ್ನೂ ಕೂಡಾ ಈ ಬಗ್ಗೆ ಗಮನ ಹರಿಸದೆ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ.

ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಈ ಸಮಸ್ಯೆ ಪರಿಹರಿಸಬೇಕಾಗಿ ಕೇಳಿಕೊಳ್ಳುವುದರ ಜೊತೆಗೆ  ಇದರ ಬಗ್ಗೆ ದಿನಾಂಕ ಗೊತ್ತುಪಡಿಸಿದ ದೊಡ್ಡ ಮಟ್ಟದಲ್ಲಿಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ

Related posts

ಸುಳ್ಳು ಸುದ್ದಿ ಹಂಚುವ ಶಾಸಕ ಸುನಿಲ್

Madhyama Bimba

ಮಲೆನಾಡು ರಕ್ಷಣಾ ಸೇನೆಯಿಂದ ಪಾದಯಾತ್ರೆ ಮಾಡುವವರಿಗಾಗಿ ಉಚಿತ ಆಂಬುಲೆನ್ಸ್ ಸೇವೆ

Madhyama Bimba

ಕಾರ್ಕಳದಲ್ಲಿ ಹಲಸು ಮಾವು ಮೇಳ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More