ಕಾರ್ಕಳಹೆಬ್ರಿ

ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ – ಹಸಿರು ಹೊರೆಕಾಣಿಕೆ ಸಮರ್ಪಣೆ

ಹೆಬ್ರಿ : ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮದ ಪ್ರಯುಕ್ತ ಬುಧವಾರ ಭವ್ಯವಾದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ವಿದ್ವಾನ್ ನಾರಾವಿ ಗುರುರಾಜ್ ಭಟ್ ಚಾಲನೆ ನೀಡಿದರು.


ಊರಿನ ಪ್ರಮುಖರು, ಗಣ್ಯರು, ಭಜನಾ ಮಂಡಳಿಯ ಸದಸ್ಯರು, ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ, ಗೌರವಾಧ್ಯಕ್ಷ ಸದಾಶಿವ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿ, ಪ್ರಮುಖರಾದ ವರಂಗ ರಾಮಚಂದ್ರ ಭಟ್, ಸುಭಾಶ್ಚಂದ್ರ ನಾಯ್ಕ್ ಸೇರಿದಂತೆ ಹಲವಾರು ಮಂದಿ ಭಾಗಿಯಾದರು. ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ದೀಪ ಬೆಳಗಿಸುವುದರ ಮೂಲಕ ಧರ್ಮಸ್ಥಳ ವಾದಿರಾಜ ಶಬರಾಯ ಉಗ್ರಾಣ ಮುಹೂರ್ತ ನೆರವೇರಿಸಿದರು. ಸಾಲಿಗ್ರಾಮ ಉಗ್ರನರಸಿಂಹ ದೇವಸ್ಥಾನದ ಅರ್ಚಕ ಮಿಥುನ್ ಅಡಿಗ ಇದ್ದರು.

ಸೂರಿಮಣ್ಣು ಮಠದ ವಿದ್ವಾನ್ ರವಿರಾಜ್ ಉಪಾಧ್ಯಾಯ ಸ್ವಾಗತಿಸಿ ವಂದಿಸಿದರು.

Related posts

ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್- ನಕ್ರೆ ಪವನ್‌ರಿಗೆ ದ್ವಿತೀಯ ಸ್ಥಾನ

Madhyama Bimba

ಪಡುಕುಡೂರು ಡೈರಿ ಅಧ್ಯಕ್ಷರಾಗಿ ಜಗದೀಶ ಹೆಗ್ಡೆ

Madhyama Bimba

ಡಾ. ಎಂ. ವೀರಪ್ಪ ಮೊಯಿಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More