ಕಾರ್ಕಳ

ಕಾರ್ಕಳ: ಕೋಳಿ ಅಂಕ ಜೂಜಾಟ: 7 ಜನರ ಬಂಧನ

ಕಾರ್ಕಳ: ನಲ್ಲೂರು ಗ್ರಾಮದಲ್ಲಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ 7 ಜನರನ್ನು ವಶಕ್ಕೆ ಪಡೆದುಕೊಂಡ ಘಟನೆ ಜ. 21ರಂದು ವರದಿಯಾಗಿದೆ.

ಉದಯ ಶೆಟ್ಟಿ ಎಂಬಾತನು ತನ್ನ ಮನೆಯ ಅಡಿಕೆ ತೋಟದ ಮಧ್ಯೆ ಶಾಮಿಯಾನ ಹಾಕಿ ಕೋಳಿ ಅಂಕ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸುಂದರ ಪಿಎಸ್‌ಐ (ತನಿಖೆ)ಯವರು ಸಿಬ್ಬಂದಿಯವರ ಸಹಾಯದಿಂದ ಧಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಳಿ ಅಂಕ ಜೂಜಾಟಕ್ಕೆ ಬಳಸಿದ ಹುಂಜ ಕೋಳಿಗಳು-4, ನಗದು ರೂ: 3000/, ಬಾಳು ಕತ್ತಿ-02, ಹುಂಜಾ ಕೋಳಿಗಳ ಕಾಲಿಗೆ ಕಟ್ಟಿದ ಹಗ್ಗ-4, ಹುಂಜಾ ಕೋಳಿಗಳ ಕಾಲಿಗೆ ಬಾಲು ಕಟ್ಟಿದ ಹಗ್ಗ-2, ಮಾರುತಿ ಕಂಪೆನಿ ತಯಾರಿಕೆಯ ಸ್ವಿಪ್ಟ್ ಡಿಜಾಯರ್ ಕಾರು-1, ಅಂದಾಜು ಮೌಲ್ಯ 2,50,000/- ಶಾಮಿಯಾನ-2, ಅಂದಾಜು ಮೌಲ್ಯ 500/- ಶಾಮಿಯಾನ್ ಕಬ್ಬಿಣದ ಕಂಬ-4, ಅಂದಾಜು ಮೌಲ್ಯ 2000/- ಸ್ಟೀಲಿನ ಟೇಬಲ್-4, ಅಂದಾಜು ಮೌಲ್ಯ 2000/- ಪ್ಲಾಸ್ಟಿಕ್ ಕುರ್ಚಿ- 25, ಅಂದಾಜು, 2500/- ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Related posts

ಮಾ. 24: ಕುಚ್ಚೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಂಗಪೂಜಾ ಮಹೋತ್ಸವ ಹಾಗೂ ಕೆಂಡೋತ್ಸವ

Madhyama Bimba

10ನೇ ವರ್ಷದ ಸಂಭ್ರಮದಲ್ಲಿ ಕಾರ್ಕಳದ ಶ್ರೀ ವಿಜಯಲಕ್ಷ್ಮೀ ಫ್ಯಾಬ್ರಿಕ್ಸ್-ದೀಪಾವಳಿಯ ಪ್ರಯುಕ್ತ ಲಕ್ಕಿ ಕೂಪನ್, ವಿಶಿಷ್ಟ ಬಹುಮಾನಗಳು

Madhyama Bimba

ಶ್ರೀಮತಿ ಆರತಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ವಿದ್ಯಾರತ್ನ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More