ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ಜಂಟಿ ಸಭೆ

ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಜಂಟಿ ಸಭೆಯು ರೋಟರಿ ಬಾಲ ಭವನದಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.

ಮುಖ್ಯ ಅತಿಥಿ ಬಂಟ್ವಾಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ಮಾತನಾಡುತ್ತಾ ರೋಟರಿ ಒಂದು ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಸಾಮಾಜಿಕ ಕಳಕಳಿಯುಳ್ಳ ಸೇವಾ ಮನೋಭಾವನೆಯ ಯುವಕರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು ಮಾತ್ರವಲ್ಲದೆ ಅವರನ್ನು ಸಂಸ್ಥೆಯಲ್ಲಿ ಉಳಿಸಿಕೊಳ್ಳುವುದು ಅಷ್ಟೇ ಪ್ರಾಮುಖ್ಯವಾಗಿದೆ ಎಂದರು.

ಕ್ಲಬ್‌ನ ಪತ್ರಿಕೆ ಸರ್ವಿಸ್‌ಅನ್ನು ಬಿಡುಗಡೆಗೊಳಿಸಿದ ವಲಯ ಸೇನಾನಿ ಜಾನ್ ಆರ್ ಡಿಸಿಲ್ವ ಕಾರ್ಕಳ ರೋಟರಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಸುರೇಂದ್ರ ನಾಯಕ್ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ 2028-29 ನೇ ಸಾಲಿನ ನಾಮನಿರ್ದೇಶಿತ ಜಿಲ್ಲಾ ಗವರ್ನರ್ ಅಲೆನ್ ವಿನಯ್ ಲೂಯಿಸ್ ಹಾಗೂ ಅಂತರಾಷ್ಟ್ರೀಯ ಸಿಒಎಲ್‌ಗೆ ರೋಟರಿ ಜಿಲ್ಲೆ 3182 ರ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾದ ಪಿಡಿಜಿ ಡಾ. ಭರತೇಶ ಆದಿರಾಜ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.

ನಾಣ್ಯ ಹಾಗೂ ಪ್ರಾಚ್ಯ ವಸ್ತುಗಳ ಸಂಗ್ರಹಕರಾದ ಸುಧಾಕರ್ ಶೆಟ್ಟಿ ಹಿರ್ಗಾನ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕ ಕೆ. ನರೇಂದ್ರ ಕಾಮತ್ ಕಾರ್ಕಳ ಇವರನ್ನು ಸನ್ಮಾನಿಸಲಾಯಿತು. ಆ ಸಂದರ್ಭದಲ್ಲಿ ವೊಕೇಷನಲ್ ಡೈರೆಕ್ಟರ್ ರೋ. ಶೈಲೆಂದ್ರ ರಾವ್ ಉಪಸ್ಥಿತರಿದ್ದರು .

ವಲಯ ಸೇನಾನಿ ಪ್ರಶಾಂತ್ ಬೆಳಿರಾಯ ಮುಖ್ಯ ಅತಿಥಿಗಳನ್ನು ಹಾಗೂ ಸುರೇಶ್ ನಾಯಕ್, ವೃಂದಾ ಹರಿಪ್ರಕಾಶ್, ವಸಂತ್ ಎಂ, ಸುಬ್ರಮಣ್ಯ ದೇವಾಡಿಗ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.

ಗೀತಾ ಕಾಮತ್ ಪ್ರಾರ್ಥಿಸಿದರು. ಜಿಲ್ಲಾ ಪ್ರತಿನಿಧಿ ರೇಖಾ ಉಪಾಧ್ಯಾಯ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.

Related posts

ಬಹುಕಾಲದ ಬೇಡಿಕಯಾಗಿದ್ದ 8 ಕಾಲುಸಂಕ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ: ಧನ್ಯವಾದ ತಿಳಿಸಿದ ಉದಯ ಶೆಟ್ಟಿ ಮುನಿಯಾಲು

Madhyama Bimba

ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ: ವಾರ್ಷಿಕ ಮಹಾರಥೋತ್ಸವ

Madhyama Bimba

ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಲೋಕಾರ್ಪಣೆ – ಸಂಭ್ರಮದ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More