ಕಾರ್ಕಳ ಭಂಡಾರಿ ಸಮಾಜ ಸಂಘ, ಭಂಡಾರಿ ಮಹಿಳಾ ಸಂಘ, ಭಂಡಾರಿ ಯುವ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ಕಾಬೆಟ್ಟು ವೇಣುಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ, ವೃತ್ತಿ ನಿರತ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಜರುಗಿತು.

ಪ್ರಾರಂಭದಲ್ಲಿ ಅಶೋಕ ಕಾರಂತರವರಿಂದ ಭಂಡಾರಿ ಬಂಧುಗಳ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.
ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮಹಾಮಂಡಲದ ಅಧ್ಯಕ್ಷರಾದ ಅಮಿತಾ ಗಿರೀಶ್ ಭಂಡಾರಿ ನೆರವೇರಿಸಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವ ಬಂಧುಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಲು ವಿನಂತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶೇಖರ್ ಎಚ್ ಭಂಡಾರಿ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವೃತ್ತಿ ನಿರತ ಹಿರಿಯರಾದ ಶೇಖರ್ ಭಂಡಾರಿ ಕೌಡೂರು, ಮಾಧವ ಭಂಡಾರಿ ಮೂಜೂರು, ವಸುದೇಶ್ ಭಂಡಾರಿ ಪಳ್ಳಿ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ಅಂಗವಾಗಿ ಪ್ರಜ್ವಲ್ ಭಂಡಾರಿ ಕೌಡೂರು, ಡಾ. ನಿರೀಕ್ಷಾ ಸದಾನಂದ ಭಂಡಾರಿ ನಲ್ಲೂರು ಮತ್ತು ರಕ್ಷಿತ್ ಭಂಡಾರಿ ಸಿ.ಎ. ಬೆಳ್ಮಣ್ಣುರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು.
ಕಾರ್ಕಳ ಭಂಡಾರಿ ಸಮಾಜ ಸಂಘದ ವತಿಯಿಂದ ನೀಡುತ್ತಿರುವ ವಿದ್ಯಾರ್ಥಿವೇತನಕ್ಕೆ ಪೂರಕವಾಗಿ ವಿದ್ಯಾನಿಧಿಗೆ ರೂಪಾಯಿ ಒಂದು ಲಕ್ಷದ ದೇಣಿಗೆಯನ್ನು ಕೆ. ವೆಂಕಪ್ಪ ಭಂಡಾರಿ ಮತ್ತು ಶಾಂತಾ ವಿ ಭಂಡಾರಿ ಕಾರ್ಕಳ ದಂಪತಿಗಳು ನೀಡಿದರು. ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕಾರ್ಕಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶೇಖರ್ ಎಚ್ ಭಂಡಾರಿ, ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷ ರಾದ ವಿಶ್ವನಾಥ್ ಭಂಡಾರಿ ನಿಂಜೂರು ಮತ್ತು ಶಶಿಧರ ಕೆ ಭಂಡಾರಿ, ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಗುರುದಾಸ್ ಭಂಡಾರಿ, ಮೂಡುಬಿದಿರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ ಎಂ ಭಂಡಾರಿ, ಭಂಡಾರಿ ಮಹಿಳಾ ಸಂಘದ ಅಧ್ಯಕ್ಷರಾದ ವೀಣಾ ರಾಜೇಶ್ ಭಂಡಾರಿ, ಭಂಡಾರಿ ಯುವ ವೇದಿಕೆ ಅಧ್ಯಕ್ಷರಾದ ಪವನ್ ಭಂಡಾರಿ ಉಪಸ್ಥಿತರಿದ್ದರು.
ದಿಯಾ ರಾಜೇಶ್ ಭಂಡಾರಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಭಂಡಾರಿ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಕೃಷ್ಣ ಭಂಡಾರಿ ವಾರ್ಷಿಕ ಲೆಕ್ಕಪತ್ರವನ್ನು ಮಹಾಸಭೆಗೆ ಮಂಡಿಸಿ ಸರ್ವಾನುಮತದ ಅನುಮೋದನೆ ಪಡೆದರು. ನವೀನ್ ಭಂಡಾರಿ ಬೈಲೂರು, ಸುಮನ ಕೃಷ್ಣ ಭಂಡಾರಿ, ಉಷಾ ಶಶಿಧರ್ ಭಂಡಾರಿ, ವೀಣಾ ರಾಜೇಶ್ ಭಂಡಾರಿ, ಲತಾ ಹರೀಶ್ ಭಂಡಾರಿ, ಮತ್ತು ಪ್ರವೀಣ್ ಕೆ ಭಂಡಾರಿ ಬೆಳ್ಮಣ್ಣು ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಭಂಡಾರಿ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ2026-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಕೃಷ್ಣ ಭಂಡಾರಿ ಜೋಡು ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಭಂಡಾರಿ ಬೈಲೂರು, ಮತ್ತು ಕೋಶಾಧಿಕಾರಿಯಾಗಿ ರೇಷ್ಮಾ ಸುದರ್ಶನ್ ಭಂಡಾರಿ ಆಯ್ಕೆಯಾದರು.
