ಮೂಡುಬಿದಿರೆ

ಲಯನ್ಸ್ ಪ್ರಾಂತ್ಯ ಸಮ್ಮೇಳನ

ಬೆಳುವಾಯಿ: ಲಯನ್ಸ್ ಕ್ಲಬ್ ಜಿಲ್ಲೆ 317ಡಿ ರೀಜಿಯನ್ 10 ಇದರ ಲಯನ್ಸ್ ಪ್ರಾಂತೀಯ ಸಮ್ಮೇಳನ ಬೆಳುವಾಯಿ ಖಂಡಿಗ ಗ್ರೀನ್ಸ್ ಆವರಣದಲ್ಲಿ ನಡೆಯಿತು.


ಲಯನ್ಸ್ ಪ್ರಾಂತ್ಯ ಪ್ರಥಮ ಮಹಿಳೆ ಸುಮತಿ ಜೆ. ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಜಗದೀಶ್ ಚಂದ್ರ ಡಿ. ಕೆ. ಸಭಾಧ್ಯಕ್ಷತೆ ವಹಿಸಿ ಲಯನ್ಸ್ ಕ್ಲಬ್ ಸೇವೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯ ನಡೆಸುತ್ತಿರುವುದಾಗಿ ಹೇಳಿದರು.

ಸಂಪನ್ಮೂಲ ವ್ಯಕ್ತಿ ಹೆಚ್. ಆರ್. ಕೇಶವ ಮಾತನಾಡಿ ಮಾನವೀಯತೆ ಮತ್ತು ಸೇವೆ ಒಗ್ಗೂಡಿದಾಗ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ಸಿಗುತ್ತದೆ ಎಂದರು. ಸೇವೆಗೆ ಶಿಕ್ಷಣ ಅಗತ್ಯ ಅಲ್ಲ ಎಂಬುದನ್ನು ಉಲ್ಲೇಖಿಸಿದರು.

ಮುಖ್ಯ ಅತಿಥಿ ಮಂಗಳೂರು ಐಎಂಎ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಮಾತನಾಡಿ ಜೀವನದ ಯಶಸ್ಸಿಗೆ ಯೋಗದೊಂದಿಗೆ ಯೋಗ್ಯತೆ ಅಗತ್ಯ. ನುಡಿದಂತೆ ನಡೆದಾಗ ನಮ್ಮ ವ್ಯಕ್ತಿತ್ವಕ್ಕೆ ಮಾನ್ಯತೆ ಸಿಗುತ್ತದೆ ಎಂದರು.

ಲಯನ್ಸ್ ವಲಯ ಅಧ್ಯಕ್ಷ ಕುಡ್ಪಿ ಅರವಿಂದ ಶೆಣೈ ಅಭಿನಂದನ ಮಾತುಗಳೊಂದಿಗೆ ಶುಭ ಹಾರೈಸಿದರು.

ಲಯನ್ಸ್ ವಲಯ ಅಧ್ಯಕ್ಷರಾದ ಮೆಲ್ವಿನ್ ಸಲ್ದಾನ, ಜೊಸ್ಸಿ ಮಿನೇಜಸ್, ಪ್ರಾಂತೀಯ ಸಮ್ಮೇಳನ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ, ಕಾರ್ಯದರ್ಶಿ ಹೆರಾಲ್ಡ್ ತಾವ್ರೋ, ಉಪಾಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಖಜಾಂಚಿ ಹರೀಶ್ ಪೂಜಾರಿ, ಸಂಚಾಲಕ ಓಸ್ವಾಲ್ಡ್, ಲಯನ್ಸ್ ಅಧ್ಯಕ್ಷರಾದ ಶಿವಪ್ರಸಾದ್ ಹೆಗ್ಡೆ, ಪ್ರತಿಭಾ ಹೆಬ್ಬಾರ್, ಸುಧೀರ್ ಭಂಡಾರಿ, ಮುರಳಿ ಬಲಿಪ, ಜಾನೆಟ್ ಡಿ, ಅರುಣ್ ಕಾರ್ಡೋಜ ಹಾಗೂ ಲಿಯೋ ಕ್ಲಬ್ ಅಧ್ಯಕ್ಷರುಗಳು, ವೇಣೂರು ಲಯನ್ಸ್ ಕಾರ್ಯದರ್ಶಿ ಜಯರಾಮ್ ಹೆಗ್ಡೆ , ಕೋಶಾಧಿಕಾರಿ ಸತೀಶ್ ಚಿಗುರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೃಷಿಕ ವಿ ಎಸ್ ಜಯರಾಜ್ ಹಾಗೂ ಅತಿಥಿ ಗಣ್ಯರು ಮತ್ತು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಲಯನ್ಸ್ ಸೇವಾ ಕಾರ್ಯಗಳನ್ನು ನಡೆಸಿಕೊಡಲಾಯಿತು. ಮಂಗಳೂರಿನ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Related posts

ಶಿರ್ತಾಡಿ ಕೃಷಿ ಪತ್ತಿನ ಸಂಘದ ಕ್ಯಾಲೆಂಡರ್ ಬಿಡುಗಡೆ

Madhyama Bimba

ಲಯನ್ಸ್: ಉಚಿತ ವಾಹನ ಚಾಲನಾ ತರಬೇತಿ ಯೋಜನೆ ಆದೇಶ ಪತ್ರ ಹಸ್ತಾಂತರ

Madhyama Bimba

ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More