ಹೆಬ್ರಿ : ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿಗಳವರ ಶುಭ ಆಶೀರ್ವಾದದೊಂದಿಗೆ, ಗೆಳೆಯರ ಬಳಗ ವರಂಗ ಇದರ ೬ ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ, ವರಂಗ ರಥೋತ್ಸವದಂದು (ಫೆ.6) ವರಂಗ ಶ್ರೀ ಪದ್ಮಾಂಬ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಪದ್ಮಾಂಬ ರಂಗ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಜ್ಯೋತಿಷಿ ಅರುಣ್ ಭಟ್ ಎಣ್ಣೆಹೊಳೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ್ ಹೆಗ್ಡೆ ಉಡುಪಿ, ಎಸ್ ಕೆ ಪಿ ಎ ಕಾರ್ಕಳ ಹಾಗೂ ಉಡುಪಿ ಜೆಲ್ಲೆಯ ನಿಕಟಪೂರ್ವ ಜಿಲ್ಲಾಧ್ಯಕ್ಷರು ಪದ್ಮ ಪ್ರಸಾದ್ ಜೈನ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಇದರ ರಾಜ್ಯಾಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ, ಎ ಸ್ ಕೆ ಪಿ ಎ ಕಾರ್ಕಳ ವಲಯದ ಅಧ್ಯಕ್ಷ ಪ್ರಮೋದ್ ಚಂದ್ರ ಪೈ ಮುನಿಯಾಲು, ಜೆ ಸಿ ಪ್ರಕಾಶ್ ಪೂಜಾರಿ, ಕೆರ್ವಾಶೆ ಯುವ ವಾಹಿನಿ ಅಧ್ಯಕ್ಷ ಶಂಕರ ಶೆಟ್ಟಿ, ವರಂಗ, ಗೆಳೆಯರ ಬಳಗ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಖ್ಯಾತ ಪತ್ರಕರ್ತ ನ್ಯೂಸ್ ಕಾರ್ಕಳ ಇದರ ರಾಮಚಂದ್ರ ಪರಪ್ಪಾಡಿ , ಗೆಳೆಯರ ಬಳಗ ಅಧ್ಯಕ್ಷ ವಿ ಆರ್ ಸತೀಶ್ ಆಚಾರ್ಯ ವರಂಗ, ಶಾಲಾ ಮುಖ್ಯೋಪಾಧ್ಯಾಯ ರತ್ನಾಕರ ಅರಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿ ಆರ್ ಸತೀಶ್ ಆಚಾರ್ಯ ವರಂಗ ಇವರ ನಟನೆ ರಚನೆ ನಿರ್ದೇಶನ ಸಾಹಿತ್ಯದ ಚಿತ್ರ ವಿಚಿತ್ರಮಯ ವಿಶ್ವರಂಗ ಕಲಾವಿದರು ವರಂಗ ತಂಡದ ಈ ವರ್ಷದ ನೂತನ ಕಥಾಮಯ ಗೀತಾಂಜಲಿ ನಾಟಕವನ್ನು ಬಿಡುಗಡೆಗೊಳಿಸಲಾಯಿತು.
ಕಲಾವಿದರಾದ ಸದಾಶಿವ ಶೆಟ್ಟಿ ಕಾರ್ಕಳ, ವಿನೋದ್ ಶೆಟ್ಟಿ ನಿಟ್ಟೆ, ಸುರೇಶ್ ನಿಟ್ಟೆ, ವಿ ಆರ್ ಸತೀಶ್ ಆಚಾರ್ಯ ವರಂಗ, ಉದಯ ಶೆಟ್ಟಿ ಮುಟ್ಲಪಾಡಿ, ಅವಿನಾಶ್ ಪೂಜಾರಿ ವರಂಗ, ಸುರೇಶ್ ಪೂಜಾರಿ ಬೈರಂಪಳ್ಳಿ ಇವರಿಗೆಲ್ಲರಿಗೂ ಗೆಳೆಯರ ಬಳಗದ ವತಿಯಿಂದ ವಿವಿಧ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಸಮಾಜ ಸೇವಕಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ವರಂಗ ವೀಣಾ ಆರ್ ಭಟ್‌ರನ್ನು ಗೌರವಿಸಲಾಯಿತು.
ಸತತ ೬ ವರ್ಷಗಳಿಂದ ಗೆಳೆಯರ ಬಳಗದ ಅಧ್ಯಕ್ಷತೆ ವಹಿಸಿ, ವಿಶ್ವರಂಗ ತಂಡದ ಸಾರಥ್ಯ ಮಾಡುತ್ತಾ ಎಲ್ಲ ಕಲಾವಿದರನ್ನು ಗುರುತಿಸಿ ಬಿರುದು ಕೊಟ್ಟು ಸನ್ಮಾನ ಮಾಡಿದ ರಂಗಭೂಮಿ ಕಲಾರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ವಿ ಆರ್ ಸತೀಶ್ ಆಚಾರ್ಯ ವರಂಗ, ಉಪಾಧ್ಯಕ್ಷ ರಾಘವೇಂದ್ರ ಸೇರಿಗಾರ್ , ಪ್ರದಾನ ಕಾರ್ಯದರ್ಶಿ ಜಗದೀಶ ಪಡಿಯಾರ್ ಹಾಗೂ ಗೆಳೆಯರ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ನಂತರ ಮಕ್ಕಳಿಂದ ನೃತ್ಯ ವೈಭವ, ವಿಶ್ವ ರಂಗ ಕಲಾವಿದರು ಇವರಿಂದ ಗೀತಾಂಜಲಿ ನಾಟಕ ಪ್ರದರ್ಶನ ನಡೆಯಿತು.
