ಕಾರ್ಕಳಹೆಬ್ರಿ

ಅಜೆಕಾರು: ಕಾಡುಹೊಳೆ ಬಳಿ ಕಾರಿಗೆ ಮಿನಿ ಬಸ್ ಡಿಕ್ಕಿ-ಗಾಯ

ಅಜೆಕಾರು: ಮರ್ಣೆ ಗ್ರಾಮದ ಕಾಡುಹೊಳೆ ಕೋಟೆ ಮಜಲು ಬ್ರಿಡ್ಜ್ ಬಳಿ ಕಾರಿಗೆ ಮಿನಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಏ. 29ರಂದು ವರದಿಯಾಗಿದೆ.

ದಾವಣಗೆರೆ ಹೊನ್ನಾಳಿ ಗ್ರಾಮದ ಬಸವರಾಜ್ ಕೆ (43), ಇವರು ಬ್ರೀಜಾ ಕಾರಿನಲ್ಲಿ ಶೈಲೇಶ್, ವೀಣಾರವರೊಂದಿಗೆ ಹೊನ್ನಾಳಿಯಿಂದ ಮೂಡಿಬಿದ್ರೆ ಕಡೆಗೆ ಬರುತ್ತಿರುವಾಗ, ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಮಿನಿ ಬಸ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ವೀಣಾ, ಶೈಲೀಶ್ ಮತ್ತು ಬಸವರಾಜ್ ಕೆ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಹೆಬ್ರಿ ಅಮೃತಭಾರತಿ ವಿದ್ಯಾಲಯದ ಆರು ಸಂಸ್ಕೃತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Madhyama Bimba

ಜೇಸಿ ಇಂರ್ಟನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ 100 ಶೇಕಡಾ ಫಲಿತಾಂಶ

Madhyama Bimba

ಮೂಡಾ ಸೈಟು ಹಿಂದಿರಿಗಿಸಿರುವುದು ಭಯದ ಶರಣಾಗತಿಯಲ್ಲ: ಬಿಪಿನಚಂದ್ರ ಪಾಲ್ ನಕ್ರೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More