ಕಾರ್ಕಳ

ಕಾರ್ಕಳ: ಮಟ್ಕಾ ಜುಗಾರಿ ಆಟ- ಈರ್ವರ ಬಂಧನ

ಕಾರ್ಕಳ: ಬೆಳ್ಮಣ್ ಪೇಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಈರ್ವರನ್ನು ವಶಪಡಿಸಿಕೊಂಡ ಘಟನೆ ಫೆ. 11ರಂದು ವರದಿಯಾಗಿದೆ.


ಉಚ್ಚಿಲ ಮುಳ್ಳಗುಡ್ಡೆಯ ಕೀರ್ತನ್(31) ಹಾಗೂ ನಂದಳಿಕೆಯ ಯೋಗೀಶ(58) ಇವರು ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಮಾಹಿತಿ ಮೇರೆಗೆ
ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕರಾದ (ತನಿಖೆ) ಸುಂದರ ಇವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದಾರೆ.

ಕೀರ್ತನ್ ಹಾಗೂ ಯೋಗೀಶರನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿ ಆಟಕ್ಕೆ ಉಪಯೋಗಿಸಿದ ಮಟ್ಕಾ ನಂಬ್ರ ಬರೆದ ಚೀಟಿ, ನಗದು 2440/- ರೂಪಾಯಿ, ಬಾಲ್ ಪೆನ್, ಪ್ಲಾಸ್ಟಿಕ್ ಕುರ್ಚಿ, ಸಣ್ಣ ಕಾಗದದ ಚೀಟಿಗಳು, ಮತ್ತು ಕಾರ್ಡ್ ಬೋರ್ಡ್‌ನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಜೆಇಇ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ನಾಗಾದೇವ್ ಎಂ.ಜಿ. ಬಿ ಪ್ಲಾನಿಂಗ್ ನಲ್ಲಿ ಜನರಲ್ ಇಡಬ್ಲ್ಯೂಎಸ್ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ

Madhyama Bimba

ಕಾರ್ಕಳ ವೆಂಕಟರಾಯ ಕಾಮತ್ ನಿಧನ

Madhyama Bimba

ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಕಾರ್ಯಗಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More