Blog

ಮುಳ್ಕಾಡು ಸರಕಾರಿ ಶಾಲೆಯಲ್ಲಿ ಕೊಠಡಿಗಳಿಗೆ ಶಿಲಾನ್ಯಾಸ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಕಾಡು  ಇಂದು ಎಂ ಆರ್ ಪಿ ಎಲ್ ಸಂಸ್ಥೆಯಿಂದ ಮಂಜೂರಾದ 25 ಲಕ್ಷ ವೆಚ್ಚದ ಎರಡು ಕೊಠಡಿಗಳ  ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಶಾಲಾ ದಾನಿಗಳ ನೆರವಿನಿಂದ ಸಾಕಾರಗೊಂಡ ಪುಣ್ಯಕೋಟಿ ವನದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಉಡುಪಿ ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಸಂಸದರಾದ  ಕೋಟ ಶ್ರೀನಿವಾಸ ಪೂಜಾರಿ ರವರು ಶಿಲನ್ಯಾಸ ನಡೆಸಿಕೊಟ್ಟು ಮಾತನಾಡಿ ಶಾಲೆಯ ಶೈಕ್ಷಣಿಕ ವಾತಾವರಣ ಭೌತಿಕ ಸೌಲಭ್ಯ ಖಾಸಗಿ ಶಾಲೆಯನ್ನು ಮೀರಿಸುವಂಥದ್ದು ಸಂತೋಷದ ವಿಚಾರ ಎಂದು ಸಂತೋಷ ವ್ಯಕ್ತಪಡಿಸಿದರು .ಕಾರ್ಕಳ ವಿಧಾನಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ವಿ .ಸುನಿಲ್ ಕುಮಾರ್ ರವರು ಅಧ್ಯಕ್ಷತೆ ವಹಿಸಿ ಶಾಲೆಯ ಸರ್ವಂಗೀಣ ಪ್ರಗತಿಯನ್ನು ಕೊಂಡಾಡಿದರು. ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾನ್ಯ ಶ್ರೀ ಸುಕೇಶ್ ಹೆಗ್ಡೆ ,ಎಂಆರ್‌ಪಿಎಲ್ ಹಿರಿಯ ಮ್ಯಾನೇಜರ್ ಶ್ರೀ ಅಶೋಕ್ ಕುಮಾರ್ ಹೆಗ್ಡೆ, ಕ್ಯಾಂಪ್ಕೊ ಸದಸ್ಯರಾದ ಶ್ರೀ ದಯಾನಂದ ಹೆಗ್ಡೆ, ಸಂಜೀವಿನಿ ಪಾರಂ ಮಾಲಕಿ ಶ್ರೀಮತಿ ಸವಿತಾ ರಾಮಕೃಷ್ಣ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸದಾಶಿವ ಪ್ರಭು, ಲಯನ್ಸ್ ಕ್ಲಬ್ ಮುನಿಯಾಲು ಇದರ ಅಧ್ಯಕ್ಷರಾದ ಮಾನ್ಯ ಶ್ರೀ ಸಂದೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜನಾರ್ಧನ ಬೆಳಿರಾಯ ಸ್ವಾಗತಿಸಿದರು .ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿರವರು ಪ್ರಸ್ತಾವನೆಗೈದರು .ಗೌರವ ಶಿಕ್ಷಕಿ ಪ್ರಫುಲ್ಲ ಧನ್ಯವಾದಗೈದರು. ಶಿಕ್ಷಕರಾದ ಸುಭಾಷ್ ಇವರು ಕಾರ್ಯಕ್ರಮ ನಿರೂಪಿಸಿದರು .ಊರಿನ ಹಿರಿಯರಾದ ಶ್ರೀ ಪ್ರಮೋದ್ ಕುಮಾರ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ,ಸಂಜೀವ ಪೂಜಾರಿ ,ವಿಶ್ವನಾಥ ನಾಯಕ್, ಪ್ರಕಾಶ್ ನಾಯಕ್, ಕೇಶವ ನಾಯಕ್, ಕೌಶಿಕ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಗೌರವ ಶಿಕ್ಷಕಿ ನಿಶಾ ಶೆಟ್ಟಿ, ರೂಪ, ಎಸ್ಟಿಎಂಸಿ ಸದಸ್ಯರು ಪೋಷಕರು ಸಹಕರಿಸಿದರು.

Related posts

ನಿಟ್ಟೆ ದೂಪದ ಕಟ್ಟೆಯಲ್ಲಿ ಮುಗುರು ಮಲ್ಲಿಗೆ

Madhyama Bimba

ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ ಮುನಿಯಾಲು ಉದಯ ಶೆಟ್ಟಿ

Madhyama Bimba

ಬೀದಿಗೆ ಬಂದ ಯಸಳೂರು ಕುಟುಂಬ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More