Blog

ಮುಳ್ಕಾಡುನಲ್ಲಿ ಶಿವರಾತ್ರಿ ಭಜನೆ

ಕಾರ್ಕಳ ತಾಲೂಕು ಎಳ್ಳಾರೆ ಮುಳ್ಕಾಡುವಿನಲ್ಲಿ ಪ್ರತಿ ವರ್ಷ ನಡೆಯುವಂತೆ ಈ ವರ್ಷವು 33ನೇ ವರ್ಷದ ಶಿವರಾತ್ರಿ ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮವು ಭಾರಿ ಅದ್ದೂರಿಯಾಗಿ ನಡೆಯಿತು.


ಮಹಶಿವರಾತ್ರಿಯ ಮಹತ್ವದ ಬಗ್ಗೆ ಶ್ರೀ ಹರಿಕಥೆ ಭಾಸ್ಕರದಾಸ ದೇವಾಡಿಗ ಕುಕ್ಕಿಕಟ್ಟೆ ಹಾಗೂ ಸೆಕ್ಸೋಪೋನ್ ವಾದನ ಅವಿನಾಶ ವರಂಗ.
ಭಾಗವಹಿಸಿದ ಭಜನಾ ತಂಡಗಳು
1 .ಈಶ್ವರ ಭಜನಾ ಮಂಡಳಿ ಮುಳ್ಕಾಡು
2. ಮಹಾದೇವಿ ಭಜನಾ ಮಂಡಳಿ ಮರ್ಣೆ
3.ಲಕ್ಷ್ಮೀ ಜನಾರ್ಧನ ಭಜನಾ ಮಂಡಳಿ ಎಳ್ಳಾರೆ
4.ಶ್ರೀರಾಮ ಬಾಲಕರ ಭಜನಾ ಮಂಡಳಿ ಶಿವಪುರ
5. ಧರ್ಮಶ್ರೀ ಭಜನಾ ಮಂಡಳಿ , ಕಬ್ಬಿನಾಲೆ
6.ಶ್ರೀ ಗದ್ದುಗೆ ಮಾರಿಯಮ್ಮ ಭಜನಾ ಮಂಡಳಿ ಪಾಲ್ಬೆಟ್ಟು
7.ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಡ್ತಲ
ಸದ್ರಿ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ 08.00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ.ಸುಕೇಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀ.ಸಂಜೀವ ಪೂಜಾರಿ, ಶ್ರೀ.ಹರೀಶ್ ಶೆಟ್ಟಿ ಕುಕ್ಕುಜೆ, ಶ್ರೀ.ಸಂಜೀವ ಪೂಜಾರಿ ಮುಳ್ಕಾಡು, ಶ್ರೀ.ರಾಜು ಪೂಜಾರಿ ಹರಿಖಂಡಿಗೆ, ಶ್ರೀ.ಗೋಪಾಲಕೃಷ್ಣ ಪೂಜಾರಿ ಮುಳ್ಕಾಡು ಇವರುಗಳು ಉಪಸ್ಥಿತಿ ಇದ್ದರು. ಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕ ಶ್ರೀ.ಶಂಕರ ಶೆಟ್ಟಿ ಮತ್ತು ಹರಿಕಥೆ ಭಾಸ್ಕರ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಸತೀಶ್ ಪೂಜಾರಿ
ಪ್ರಾರ್ಥನೆಯನ್ನು ಪ್ರಮೀಳಾ, ರಕ್ಷಿತಾ ಸುವರ್ಣ ಮುಳ್ಕಾಡು
ಧನ್ಯವಾದವನ್ನು ಕಿಶೋರ್ ಹರಿಖಂಡಿಗೆ ನೆರವೇರಿಸಿದರು.

Related posts

ಕಾರ್ಕಳ ಬೈ ಪಾಸ್ ಬಳಿ ಲಾರಿ ಬೈಕ್ ಡಿಕ್ಕಿ

Madhyama Bimba

ಸಂಜೀವ ಕಾಣಿಯೂರು  ಹೇಳಿಕೆಗೆ  ಮೂಡುಬಿದಿರೆ ಸಂಘ ಖಂಡನೆ

Madhyama Bimba

ಅಂಬೇಡ್ಕರ್ ಅವಹೇಳನ ಬಗ್ಗೆ ಬಿಜೆಪಿ ಮಾತನಾಡಲೇ ಇಲ್ಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More