Blog

ಮುನಿಯಾಲು ಬಂಟರ ಸಂಘದ ಕಾರ್ಯಕ್ರಮ

ಮುನಿಯಾಲು ಬಂಟರಸಂಘದ ವತಿಯಿಂದ ಹದಿನೆಂಟನೇ ವರ್ಷದ ವಿದ್ಯಾರ್ಥಿ ವೇತನ,  ಆಶಕ್ತರಿಗೆ ಸಹಾಯಧನ ಹಾಗೂ ಸಾಧಕರಿಗೆ ಸನ್ಮಾನ  ಸಮಾರಂಭವು  ಮುನಿಯಾಲಿನ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.


ಈ ಸಂದರ್ಭದಲ್ಲಿ, ಭಾರತ ಸೈನ್ಯ ದಲ್ಲಿ ಹದಿನೇಳು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಮುನಿಯಾಲಿನ ವೀರ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಚವಟಿ ಶಂಕರ್ ಶೆಟ್ಟಿ ಅಲ್ಲದೇ ಜೂನಿಯರ್ ಕಬಡ್ಡಿ ವಿಭಾಗದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿಪುಲ್ ಶೆಟ್ಟಿ ಮುಟ್ಲುಪಾಡಿ ಇವರನ್ನು ಸನ್ಮಾನಿಸಲಾಯಿತು.

     ಕಾರ್ಯಕ್ರಮದ ವೇದಿಕೆಯಲ್ಲಿ ಬಂಟರ ಸಂಘ ಮುನಿಯಾಲು ಇದರ ಗೌರವಧ್ಯಕ್ಷ ರಾದ ದಿವಾಕರ್ ವೈ ಶೆಟ್ಟಿ, ಸಂಘದ ಅಧ್ಯಕ್ಷರಾದ ಮುಟ್ಲುಪಾಡಿ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ರಾಜ್ ಶೆಟ್ಟಿ ಮತ್ತು ನವೀನ್ ರಾಜ್ ಶೆಟ್ಟಿ, ಉಪಾಧ್ಯಕ್ಷರಾದ ಸುರೇಂದ್ರ ಶೆಟ್ಟಿ ಇದ್ದು, ಕಾರ್ಯಕ್ರಮದಲ್ಲಿ ಗಣ್ಯರಾದ ಸೀತಾರಾಮ್ ಕಡಂಬ, ಅಶೋಕ್ ಶೆಟ್ಟಿ, ಭುಜಂಗ ಶೆಟ್ಟಿ, ಸುಜಯ್ ಶೆಟ್ಟಿ, ಸುಂದರ್ ಶೆಟ್ಟಿ, ಸುರೇಶ್ ರೈ, ಸಮೃದ್ಧಿ ಪ್ರಕಾಶ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಮತ್ತು ದಯಾನಂದ ಶೆಟ್ಟಿ ಮುಟ್ಲುಪಾಡಿ ಇವರು ಉಪಸ್ಥಿತರಿದ್ದರು.
ಅಲ್ಲದೇ ವಿದ್ಯಾರ್ಥಿ ಗಳು, ಪೋಷಕರು ಹಾಗೂ ಬಂಟ ಸಮಾಜಬಂದುಗಳು ಉಪಸ್ಥಿತರಿದ್ದರು.

Related posts

ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷರಾಗಿ ಯಶೋಧ ಶೆಟ್ಟಿ ಪುನರಾಯ್ಕೆ

Madhyama Bimba

ದಸಂಸ ಮನವಿ

Madhyama Bimba

ಲೀಲಾವತಿ ಪೊಸಲಾಯಿಯವರಿಗೆ ರಂಗ ಚತುರೆ ಬಿರುದು ಪ್ರಧಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More