ಕಾರ್ಕಳ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ

ಆಶು ಕವಿ ಸರ್ವಜ್ಞ ತನ್ನ ತ್ರಿಪದಿ ಕವನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಎತ್ತಿ ಹಿಡಿದು ತಿದ್ದಿ ತೀಡಿದ ಒಬ್ಬ ಸಮಾಜ ಸುಧಾರಕ. ಹಿಂದುಳಿದ ಕುಂಬಾರ ಕುಟುಂಬದಲ್ಲಿ ಹುಟ್ಟಿದ ಈ ಕವಿಗೆ ಮೇಲ್ವರ್ಗದವರ ತುಳಿತವೇ ಒಂದು ಶಕ್ತಿಯಾಗಿ ಮುಂದೆ ಅದೇ ತ್ರಿಪದಿಯಾಗಿ ಹೊರಹೊಮ್ಮಿ ಜಾತಿ ಮತ ಧರ್ಮ ರಾಜಕೀಯದ ಸಾಮಾಜಿಕ ನ್ಯಾಯ ಪ್ರತಿಪಾದನೆಗೆ ಸ್ಪೂರ್ತಿ ನೀಡಿತು. ಇವರ ತ್ರಿಪದಿಗಳು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳು ತ್ರಿಕಾಲಾಭಾದಿತ ಸತ್ಯದ ತಳಹದಿಯ ಮೇಲೆ ನಿಂತಿವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದರು.

ಅವರು ಕಾರ್ಕಳ ಸರ್ವಜ್ಞ ಸರ್ಕಲ್ ಬಳಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಹಿಂದುಳಿದ ವರ್ಗದ ಘಟಕ ಜಂಟಿಯಾಗಿ, ಆಯೋಜಿಸಿದ್ದ ಸರ್ವಜ್ಞ ಕವಿಯ ಜನ್ಮದಿನ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ಟಲಿನೋ ನಕ್ರೆ, ಕುಲಾಲ ಸಮಾಜದ ಮುಖಂಡ ಕುಶ ಮೂಲ್ಯ ಸಂದರ್ಭೋಜಿತ ಮಾತುಗಳನ್ನಾಡಿದರು.

ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕದ ಅಧ್ಯಕ್ಷರಾದ ಅನಿಲ್ ಪೂಜಾರಿಯವರು ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಪ್ರಭಾಕರ ಬಂಗೇರ, ಜಗನ್ನಾಥ ಮೂಲ್ಯ, ವಿವೇಕಾನಂದ ಶೆಣೈ, ಸುನಿಲ್ ಭಂಡಾರಿ, ಶಾಕಿರ್, ಅಬ್ದುಲ್ ಸಾಣೂರು, ಶೋಭಾ, ರೀನಾ ಕ್ಯಾಥಾರಿನ್, ಗೋಪಾಲಕೃಷ್ಣ, ಕೃಷ್ಣ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದು, ವಿಶ್ವನಾಥ ಭಂಡಾರಿ ಧನ್ಯವಾದ ಸಲ್ಲಿಸಿದರು.

Related posts

ಆಟೋರಿಕ್ಷಾ-ಬೈಕ್ ಅಪಘಾತ: ಗಾಯ

Madhyama Bimba

ಅನಂತಶಯನ ಶಾರದಾ ಮಹಿಳಾ ಮಂಡಳಿ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಫಾಟಕ್

Madhyama Bimba

ಕುಡಿಯುವ ನೀರಿನ ಸಮಸ್ಯೆ : ಸಹಾಯವಾಣಿ ಸ್ಥಾಪನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More