ಆದಿತ್ಯ ಟ್ರಸ್ಟ್ (ರಿ) ನಕ್ರೆ ಕಾರ್ಕಳ ವತಿಯಿಂದ ದಿ. ಯಶವಂತಿ ಎಸ್ ಸುವರ್ಣ ಇವರ 86ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಪುತ್ರಿ ಪ್ರೊ. ಉಷಾರಾಣಿ ಎಸ್ ಸುವರ್ಣ ವಿಶ್ರಾಂತ ಪ್ರಾಧ್ಯಾಪಕರು ಇವರ ಪ್ರಾಯೋಜಕತ್ವದಲ್ಲಿ ಅಶಕ್ತರಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ಜ. 31ರಂದು ಯುವ ಸಂಗಮ, ಆನಂದಿ ಮೈದಾನ ನಕ್ರೆ ಇಲ್ಲಿ ಜರಗಿತು.


ಕಾರ್ಯಕ್ರಮವನ್ನು ಜಾರ್ಕಳ ಉದ್ಯಮಿ ಕಮಲಾಕ್ಷ ನಾಯಕ್ ದೀಪ ಬೆಳಗಿಸಿ ಯಶವಂತಿ ಎಸ್ ಸುವರ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಶ್ರೀಮತಿ ಯಶವಂತಿ ಎಸ್ ಸುವರ್ಣರು ಸಮಾಜದಲ್ಲಿರುವ ಬಡವರಿಗೆ ಅಗತ್ಯವಾದ ಸಹಾಯವನ್ನು ಒದಗಿಸಿಕೊಟ್ಟು ಅವರ ಕಷ್ಟದಲ್ಲಿ ಭಾಗಿಯಾಗುತ್ತಿದ್ದರು. ಅವರ ಹುಟ್ಟಿದ ದಿನವನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಹೋಗುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ ರೈತರ ಕೃಷಿ ಕಂಪನಿ ಅಧ್ಯಕ್ಷ ಅಂತೋನಿ ಡಿಸೋಜಾ ಯಶವಂತಿ ಸುವರ್ಣರ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಮಾತನಾಡಿದರು.

ಬಿಪಿನ್ ಚಂದ್ರಪಾಲ್ ಇವರು ಕನ್ನಡ ಸಾಹಿತ್ಯದಲ್ಲಿ ಅವರು ಬರೆದ ಪುಸ್ತಕಗಳು, ಸಾಮಾಜಿಕ ಕಳಕಳಿಯ ಕುರಿತು ಮಾತನಾಡಿದರು.

ಎಂಜಿಎಂ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಉಷಾರಾಣಿ ಎಸ್ ಸುವರ್ಣ, ಪೊಲೀಸ್ ಇಲಾಖೆಯ ನಿವೃತ್ತ ಆಡಳಿತ ಅಧಿಕಾರಿ ದಿವಾಕರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಶಕ್ತರಿಗೆ ಆರ್ಥಿಕ ಸಹಾಯ ನೀಡಲಾಯಿತು. ಆದಿತ್ಯ ಟ್ರಸ್ಟಿನ ಕಾರ್ಯದರ್ಶಿ ರಮೇಶ್ ನಕ್ರೆ ಕಾರ್ಯಕ್ರಮ ಆಯೋಜಿಸಿ ನಿರೂಪಿಸಿ ಧನ್ಯವಾದವಿತ್ತರು. ಕು. ರಕ್ಷಾ ನಕ್ರೆ ಪ್ರಾರ್ಥಿಸಿದರು.
