ಕಾರ್ಕಳ

ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೆ ಸಿದ್ದಗೊಂಡಿದೆ ಕಾರ್ಕಳದ ಡಾ.ಬಿ. ಆರ್. ಅಂಬೇಡ್ಕರ್ ಭವನ

ಕಾರ್ಕಳ: ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ಕಾರ್ಕಳ ಶಾಸಕರು ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ರವರ ಮಹತ್ವಕಾಂಕ್ಷೆಯ ಯೋಜನೆಯಾದ ಡಾ. ಬಿ ಆರ್ ಅಂಬೇಡ್ಕರ್ ಭವನ ಲೋಕಾರ್ಪಣೆಗೆ ಸಿದ್ದವಾಗಿದೆ. ೨೫ ಫೆಬ್ರವರಿ ಬುಧವಾರದಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಂದ ಲೋಕಾರ್ಪಣೆಗೊಳ್ಳಲಿದೆ.


ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ವಿಶೇಷ ಸಹಕಾರದಿಂದ ಸುನಿಲ್ ಕುಮಾರ್ ರವರ ಸ್ವರ್ಣ ಕಾರ್ಕಳದ ಕನಸಿನ ಭಾಗವಾಗಿ, ದೂರದೃಷ್ಠಿತ್ವ ಹಾಗೂ ವಿಶೇಷ ಪ್ರಯತ್ನದ ಫಲವಾಗಿ ಸುಮಾರು 6.00 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ಸುಸ್ಸಜ್ಜಿತ ಭವನಕ್ಕೆ ಅಂದು ಪಕ್ಷ ಭೇಧ ಮರೆತು ಸಮುದಾಯದ ಸುಮಾರು 3000 ಕ್ಕೂ ಅಧಿಕ ಜನರ ಉಪಸ್ಥಿತಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಿದ್ದರು. ಇದರ ಫಲವಾಗಿ ಜನತೆಯ ಉಪಯೋಗಕ್ಕೆ ಸುಂದರವಾದ ಸಭಾ ಭವನ ನಿರ್ಮಾಣಗೊಂಡಿದೆ.

ತಾಲೂಕು ಕೇಂದ್ರಗಳಲ್ಲಿ ಇಷ್ಟು ದೊಡ್ಡ ಮೊತ್ತದ ಹಾಗೂ ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣ ಆಗಿರುವುದು ಕಾರ್ಕಳದಲ್ಲಿ ಮಾತ್ರ ಎಂಬುವುದು ಅತ್ಯಂತ ಹೆಮ್ಮೆಯ ವಿಚಾರ. ಈ ಭವನದಲ್ಲಿ ವಿಶಾಲವಾದ ಸಭಾ ಭವನ, ಊಟದ ಹಾಲ್, ೧೦ ವಿಶ್ರಾಂತಿ ಕೊಠಡಿಗಳನ್ನು ಒಳಗೊಂಡಿದೆ ಇಂತಹ ಯೋಜನೆಯನ್ನು ಜನತೆಗೆ ಒದಗಿಸಿದ ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ರವರಿಗೆ ಹಾಗೂ ಅಂದಿನ ಸಮಾಜ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಎಸ್.ಸಿ ಮೋರ್ಚಾ ವತಿಯಿಂದ ಈ ಸಂಧರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಸಮಾಜದ ಬಂಧುಗಳು ನಾಳೆ ನಡೆಯಲಿರುವ ಡಾ. ಬಿ ಆರ್ ಅಂಬೇಡ್ಕರ್ ಭವನ ಲೋಕಾರ್ಪಣೆ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗೋಣ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಡುಪಿ ಜಿಲ್ಲಾ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀನಿವಾಸ ಕಾರ್ಲ ತಿಳಿಸಿರುತ್ತಾರೆ.

Related posts

ಸಿಎಸ್‌ಇಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

Madhyama Bimba

ಅಜೆಕಾರು: ಇಲಾಖಾ ಅನುಮತಿಯಿಲ್ಲದೆ ಅಪರಿಚಿತರಿಂದ ರಸ್ತೆಯ ಭಾಗದಲ್ಲಿ ಅಗೆತ-ವಾಹನ ಸಂಚಾರಕ್ಕೆ ತೊಂದರೆ

Madhyama Bimba

ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More