ಕಾರ್ಕಳ

ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಮತ್ತು ಋಕ್ ಸಂಹಿತಾ ಮಹಾಯಾಗದ ಆಮಂತ್ರಣ ಪತ್ರ ಬಿಡುಗಡೆ

ಶಿವಪುರ : ಭಜನೆಗೆ ಅಪಾರವಾದ ಶಕ್ತಿಯಿದೆ, ದೇವರನ್ನು ಒಲಿಸಲು ಭಜನೆಯೇ ಸುಲಭದ ಮಾರ್ಗ, ಭಜನೆಯ ಮಹಾಶಕ್ತಿಯನ್ನು ಸದಾಶಿವ ಉಪಾಧ್ಯಾಯರು ಸೂರಿಮಣ್ಣಿನ ಪವಿತ್ರ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ್ದಾರೆ. ಆ ಭಜನೆ ಈಗ ಸುವರ್ಣ ಸಂಭ್ರಮದಲ್ಲಿರುವುದು ವಿಶೇಷವಾಗಿದೆ ಎಂದು ಧಾರ್ಮಿಕ ಮುಖಂಡ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಹೇಳಿದರು.

ಹೆಬ್ರಿ ತಾಲ್ಲೂಕಿನ ಶಿವಪುರ ಸೂರಿಮಣ್ಣು ಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಮತ್ತು ಋಕ್ ಸಂಹಿತಾ ಮಹಾಯಾಗದ ಆಮಂತ್ರಣ ಪತ್ರವನ್ನು ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.


ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಮುಖಂಡ ಶಿವಪುರ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸೂರಿಮಣ್ಣಿನ ಪವಿತ್ರ ಮಣ್ಣಿಗೆ ಅಪಾರವಾದ ಅದ್ಭುತ ಶಕ್ತಿಯಿದೆ ಎಂಬುದನ್ನು ತಪಸ್ಸಿನ ಮೂಲಕ ಸಾಧಿಸಿ ತೋರಿದ್ದಾರೆ. ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಮತ್ತು ಋಕ್ ಸಂಹಿತಾ ಮಹಾಯಾಗವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸುವಂತೆ ವಿಜ್ಞಾಪಿಸಿದರು.

ಸೂರಿಮಣ್ಣು ಮಠದ ಮುಖ್ಯಸ್ಥರಾದ ಭಜನಾ ಸುವರ್ಣ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಸದಾಶಿವ ಉಪಾಧ್ಯಾಯ ಮಾತನಾಡಿ ಭಜನಾ ಸಂಭ್ರಮ ಮಾಹಿತಿ ನೀಡಿದರು.

ವಿಧ್ವಾನ್ ಸೂರಿಮಣ್ಣು ರವಿರಾಜ್ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ವಕೀಲ ಭರತ್ ಕುಮಾರ್ ಶೆಟ್ಟಿ, ಮುಖಂಡ ರಮೇಶ ಪೂಜಾರಿ ಶಿವಪುರ, ರಾಮಚಂದ್ರ ಭಟ್ ವರಂಗ, ಸುಭಾಶ್ಚಂದ್ರ ನಾಯ್ಕ್ ಸೂರಿಮಣ್ಣು, ರಾಧಾಕೃಷ್ಣ ಪುತ್ತಿ ಪುತ್ತಿಬೆಟ್ಟು, ಭಜನಾ ಸುವರ್ಣ ಸಂಭ್ರಮ ಸಮಿತಿಯ ಮಹಿಳಾ ಮತ್ತು ಯುವ ಘಟಕದ ಪದಾಧಿಕಾರಿಗಳು, ಸದಸ್ಯರು, ಸಮಿತಿಯ ಸದಸ್ಯಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಬಲ್ಲಾಡಿ ಚಂದ್ರಶೇಖರ ಭಟ್

ನಿರೂಪಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿ ವಂದಿಸಿ ರವಿರಾಜ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.

Related posts

ಕಾರ್ಕಳ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು

Madhyama Bimba

ರೋಟರಿ ಕ್ಲಬ್ ಕಾರ್ಕಳ:  ರಸ್ತೆ ಸಂಚಾರ ಸುರಕ್ಷತಾ ಜಾಗೃತಿ ಅಭಿಯಾನ 

Madhyama Bimba

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ  ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More