ಕಾರ್ಕಳಹೆಬ್ರಿ

ಅನ್ಯ ರಾಜ್ಯದ ವಲಸೆ ಸೆಲೂನ್ ಕಾರ್ಮಿಕರಿಂದ ಕಾನೂನು ಬಾಹಿರ ಚಟುವಟಿಕೆ: ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ನಿರೀಕ್ಷಕರಿಗೆ ಮನವಿ

ಅನ್ಯ ರಾಜ್ಯದ ವಲಸೆ ಸಲೂನ್ ಕಾರ್ಮಿಕರು ಸೆಲೂನಿನ ನಿಯಮಗಳನ್ನು ಪಾಲಿಸದೇ, ಗುರುತು ಚೀಟಿ ನೀಡದೆ ಕೆಲಸ ಮಾಡುತ್ತಾ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕ್ಷೌರಿಕ ವೃತ್ತಿಗೆ ಕಳಂಕ ತರುತ್ತಿರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಕಳ ತಾಲೂಕು ಸವಿತಾ ಸಮಾಜವು ಪೋಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.


ಇತ್ತೀಚಿನ ವರುಷಗಳಲ್ಲಿ ಕೆಲವು ಕಡೆ ಸೆಲೂನ್‌ಗಳನ್ನು ಅನ್ಯ ರಾಜ್ಯದ ಕಾರ್ಮಿಕರಿಗೆ ಕ್ಯಾಂಟ್ರಾಕ್ಟ್ ನಲ್ಲಿ ನೀಡಿದ್ದು, ಕಾರ್ಮಿಕರು ಯಾವುದೇ ನಿಯಮಗಳನ್ನು ಪಾಲಿಸದೆ, ಸ್ವಚ್ಛತೆ ಕಾಪಾಡದೆ ತಡ ರಾತ್ರಿ ವರೆಗೂ ಸಲೂನ್ ತೆರೆದು ಮೋಜಿನ ಜಾಗ ಮಾಡಿಕೊಂಡು ಈ ವೃತ್ತಿಗೆ ಹಾಗೆಯೇ ಸವಿತಾ ಸಮಾಜ ಸಂಘಟನೆಗೆ ಕಳಂಕ ತರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಕಾನೂನು ಬಾಹಿರವಾಗಿ ವೃತ್ತಿ ಯನ್ನು ಮಾಡುತ್ತಿರುವ ಅನ್ಯ ರಾಜ್ಯದ ಹಿಂದಿ ಮಾತಾಡುವ ಕಾರ್ಮಿಕರ ಗುರುತು ಚೀಟಿಯನ್ನು ಪಡೆದು ಅವರಿಗೆ ಎಚ್ಚರಿಕೆ ನೀಡಬೇಕೆಂದು ಸಂಘಟನೆಯು ವಿನಂತಿಸಿದೆ.

ಸವಿತಾ ಸಮಾಜದ ಜಿಲ್ಲಾ ಗೌರವಾಧ್ಯಕ್ಷರಾದ ನಿಂಜೂರು ವಿಶ್ವನಾಥ ಭಂಡಾರಿ, ತಾಲೂಕು ಅಧ್ಯಕ್ಷರಾದ ನಾಗೇಶ್ ಭಂಡಾರಿ, ಬೈಲೂರು ವಲಯಾಧ್ಯಕ್ಷರಾದ ಹರೀಶ್ ಭಂಡಾರಿ, ಕೋಶಾಧಿಕಾರಿ ಯಶೋಧರ, ತಾಲೂಕು ಮಾಜಿ ಕಾರ್ಯದರ್ಶಿ ನವೀನ್ ಭಂಡಾರಿ ಉಪಸ್ಥಿತರಿದ್ದರು.

Related posts

ರಾಜ್ಯಮಟ್ಟದ ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳ ಸಾಧನೆ

Madhyama Bimba

ಸನ್‌ಮಾರ್ಗ್ ಎನರ್ಜಿಸ್ ಕಾರ್ಕಳದಲ್ಲಿ ಶುಭಾರಂಭ

Madhyama Bimba

ಅಮೃತಭಾರತಿ ಶಿಕ್ಷಕರಿಗೆ ವಿವಿಧ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More