ಮೂಡುಬಿದಿರೆ

ಕಾಳಿಕಾಂಬಾ ನಗರ ಫಲಕ ಅನಾವರಣ

ಮೂಡುಬಿದಿರೆ ಕಾಳಿಕಾಂಬಾ ದೇವಸ್ಥಾನ ಪರಿಸರವನ್ನು ಪುರಸಭೆಯಿಂದ ಕಾಳಿಕಾಂಬಾ ನಗರವೆಂದು ಘೋಷಿಸಿದ್ದು ಜೈನಪೇಟೆ ಮುಖ್ಯರಸ್ತೆಯಿಂದ ಕಾಳಿಕಾಂಬಾ ದೇವಸ್ಥಾನದ ತಿರುವಿನಲ್ಲಿ ಕಾಳಿಕಾಂಬಾ ನಗರ ಫಲಕವನ್ನು ಇಂದು ಅನಾವರಣಗೊಳಿಸಲಾಯಿತು.

ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ನಾಮಫಲಕವನ್ನು ಅನಾವರಣಗೊಳಿಸಿದರು.

ಪುರಸಭೆಯ ಮಾಜಿ ಸದಸ್ಯರಾದ ಪುರಂದರ ದೇವಾಡಿಗ, ಶ್ವೇತಾ ಜೈನ್, ಕ್ಷೇತ್ರದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ, ಮೊಕ್ತೇಸರಾದ ಶಿವರಾಮ ಆಚಾರ್ಯ, ಯೋಗೀಶ್ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ, ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ, ಪ್ರೆಸ್‌ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಹಾಗೂ ಆಡಳಿತ ಮಂಡಳಿ, ಸೇವಾ ಸಮಿತಿ ಮಹಿಳಾ ಸಮಿತಿ ಹಾಗೂ ಸಹ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಪಂಚಾಯತ್ ನೌಕರರು

Madhyama Bimba

ವಿಶ್ರಾಂತ ಶಿಕ್ಷಕ ಶಿಶುಪಾಲ ಹೆಗ್ಡೆ ನಿಧನ

Madhyama Bimba

ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಸಿಬ್ಬಂದಿ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More