ಕಾರ್ಕಳ ಪುರಸಭೆಯ ಕುಂಟಲ್ಪಾಡಿ ಪ್ರದೇಶದಲ್ಲಿ ಏಳು ದಿನಗಳಿಂದ ಜನರಿಗೆ ನೀರು ಇಲ್ಲದೆ ಸಮಸ್ಯೆಯಾಗಿದ್ದು ಸ್ಥಳೀಯರು ಶಾಸಕರಾದ ವಿ. ಸುನೀಲ್ ಕುಮಾರ್ ಅವರ ಕಛೇರಿಗೆ ತೆರಳಿ ನೀರಿನ ಸಮಸ್ಯೆಯನ್ನು ಹೇಳಿಕೊಂಡಾಗ ತಕ್ಷಣವೇ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಫೋನಾಯಿಸಿ ಆ ಪ್ರದೇಶಕ್ಕೆ ಕೂಡಲೇ ನೀರು ನೀಡುವಂತೆ ಸ್ಪಂದಿಸಬೇಕು ಎಂದು ಹೇಳಿದರು.
ನಂತರ ಮಾಜಿ ಪುರಸಭಾ ಸದಸ್ಯರಾದ ಸುನೀಲ್ ಕೋಟ್ಯಾನ್, ಪ್ರಕಾಶ್ ರಾವ್ ರವರ ನೇತೃತ್ವದಲ್ಲಿ ಸ್ಥಳೀಯರು ಸೇರಿ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.
ಇಂದು ಸಾಯಂಕಾಲದ ಒಳಗೆ ಬಾವಿಯ ಪಂಪನ್ನು ಸರಿಪಡಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜೇಶ್ ಕೋಟ್ಯಾನ್, ಅಮರ್ ಶೆಟ್ಟಿಗಾರ್, ಶೇಖರ್, ಕಾರ್ತಿಕ್, ಶಾಂತ ಪೂಜಾರ್ತಿ, ವಿನೋದ್ ದೇವಾಡಿಗ, ಬೇಬಿ ಪೂಜಾರ್ತಿ, ನಾಗೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
