ಮೂಡುಬಿದಿರೆ

 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ್ಯ ಪೂಜಾರಿ, ಉದ್ಯಮಿ ಸುರೇಶ್ ಪೂಜಾರಿಯವರಿಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಳಿಯೂರು ನವೋದಯ ರುಕ್ಕಯ್ಯ ಪೂಜಾರಿ ಮತ್ತು ಉದ್ಯಮಿ, ಉಮಲತ್ತಡೆ ದೈವಸ್ಥಾನಕ್ಕೆ ಮೇಲ್ಚಾವಣಿಯನ್ನು ಅಚ್ಚುಕಟ್ಟಾಗಿ ಅತೀ ಕಡಿಮೆ ದರದಲ್ಲಿ ಅಳವಡಿಸಿಕೊಟ್ಟು ಉಚಿತವಾಗಿ ಸ್ಲೈಡಿಂಗ್ ಗೇಟ್ ನಿರ್ಮಿಸಿಕೊಟ್ಟಿರುವ ಸುರೇಶ್ ಪೂಜಾರಿ ಮಾರ್ನಾಡು ಅವರನ್ನು ಉಮಲತ್ತಡೆ ದೈವಸ್ಥಾನದ ಜಾತ್ರೋತ್ಸವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಅಳಿಯೂರು ಉಮಲತ್ತಡೆ ಶ್ರೀ ಧರ್ಮರಸು ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮ ಬೈದರ್ಕಳ ದೇವಸ್ಥಾನದ ಜಾತ್ರೋತ್ಸವ ಸಂದರ್ಭ ನಡೆದ ಈ ಸನ್ಮಾನ ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷ ಪ್ರವೀಣ್ ಭಟ್, ಮಜಲೋಡಿಗುತ್ತು ಪ್ರಮೋದ್ ಅರಿಗ, ಪಣಪಿಲ ಅರಮನೆ ವಿಮಲ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಮಹಾವೀರ್ ಜೈನ್, ಪ್ರಮುಖರಾದ ಲಕ್ಷ್ಮಣ್ ವಿ ಕೋಟ್ಯಾನ್, ಲಕ್ಷ್ಮಣ್ ಸುವರ್ಣ, ಉದ್ಯಮಿ ಸಂತೋಷ್ ಕೆ ಪೂಜಾರಿ, ವಿಶ್ವನಾಥ್ ಕೋಟ್ಯಾನ್ ಹನ್ನೇರ್ ಈ ಸಂದರ್ಭದಲ್ಲಿದ್ದರು.

Related posts

ಜೆಸಿಐ ಮೂಡಬಿದ್ರಿ ತ್ರಿಭುವನ್ ವಲಯದಲ್ಲಿ ಪ್ರಥಮ

Madhyama Bimba

“ಸ್ವಚ್ಛ ಸರ್ವೇಕ್ಷಣೆ” ಸ್ವಚ್ಛತೆಯ ಸಮೀಕ್ಷೆ

Madhyama Bimba

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ’ ಕುರಿತು ಜಾಗೃತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More