ಮೂಡುಬಿದಿರೆ

ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನಿಂದ ದಂತ ತಪಾಸಣೆ ಮತ್ತು ಚಿಕಿತ್ಸೆ

ಮಾಜಿ ಸಚಿವರ ಹೆಸರಿನಲ್ಲಿರುವ ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಶ್ವ ವಿದ್ಯಾನಿಲಯ ದೇರಳಕಟ್ಟೆ ಇಲ್ಲಿನ ಮಕ್ಕಳ ದಂತ ಚಿಕಿತ್ಸಾ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ “ವಿದ್ಯಾರ್ಥಿಗಳ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ’ವು ಕಲ್ಲಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ವನಜಾಕ್ಷಿ ಎಜುಕೇಶನ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಕೆ. ಶ್ರೀಪತಿ ಭಟ್ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು.

ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕಿ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ಪರಿಪೂರ್ಣ ಆರೋಗ್ಯಕ್ಕೆ ಆರೋಗ್ಯಪೂರ್ಣ ಹಲ್ಲುಗಳೇ ಮೂಲ ಆಧಾರವಾಗಿದ್ದು ಮಕ್ಕಳ ಹಲ್ಲುಗಳ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿರುವ
ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸರಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು ಇದು ಟ್ರಸ್ಟ್ ವತಿಯಿಂದ ನಡೆಯುತ್ತಿರುವ 10ನೇ ಶಿಬಿರವಾಗಿದೆ ಎಂದರು.

ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಶ್ವವಿದ್ಯಾನಿಲಯದ ದಂತ ತಜ್ಞೆ ಡಾ. ದೃಶ್ಯ ಮತ್ತಿತರರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯನಿ ನಿಶಾ ಸ್ವಾಗತಿಸಿದರು. ಅನಿತಾ ಎಲ್. ಸಿಕ್ಕೇರಾ ಕಾರ್ಯಕ್ರಮ ನಿರೂಪಿಸಿದರು. ಆಶಾ ವಂದಿಸಿದರು. ಎಲ್.ಕೆ.ಜಿ.ಯಿಂದ 8ನೇ ತರಗತಿವರೆಗಿನ ಎಲ್ಲಾ 176 ಮಕ್ಕಳ ದಂತ ತಪಾಸಣೆ ನಡೆಸಿ ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು.

Related posts

ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ: ಕೋಟ್ಯಾನ್ ಖಂಡನೆ

Madhyama Bimba

ಮೂಡುಬಿದಿರೆ: ಅಮೃತ ಸಭಾಭವನ ಉದ್ಘಾಟನೆ

Madhyama Bimba

ಎಕ್ಸಲೆಂಟ್ ಸಂಗೀತ ಸಂಜೆಗೆ ತಲೆದೂಗಿದ ರಾಜಾಂಗಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More