ಮೂಡುಬಿದಿರೆ ಹೊಸಬೆಟ್ಟು ಗ್ರಾಮದ ಬಿರಾವಿನಲ್ಲಿ ಭಾನುವಾರ ನೆರೆಕರೆಯ ಸಂಬಂಧಿಕರ ಮನೆಯಲ್ಲಿ ವ್ಯಕ್ತಿಯೋರ್ವರು ಕೊನೆಯುಸಿರೆಳೆದಿದ್ದಾರೆ. ಬಿರಾವು ನಿವಾಸಿ ಜಯಂತ್ (55) ಮೃತಪಟ್ಟವರಾಗಿದ್ದಾರೆ.,
ರೋಟರಿ ಶಾಲೆಯ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಯಂತ್, ಭಾನುವಾರ ರಾತ್ರಿ ತಮ್ಮ ಬಾವನ ನೆರೆಕರೆಯ ಮನೆಯಲ್ಲಿ ನಡೆಯುತ್ತಿದ್ದ ದೈವದ ಕೋಲಕ್ಕೆ ತೆರಳಿದ್ದರು. ಈ ನಡುವೆ ಅವರಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ವಿಧಿವಶರಾಗಿದ್ದಾರೆ. ಅನಿರೀಕ್ಷಿತ ಘಟನೆಯಿಂದಾಗಿ ಕೋಲೋತ್ಸವವನ್ನು ಅರ್ಧದಲ್ಲೇ ನಿಲ್ಲಿಸಲಾಯಿತು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
