ಮೂಡುಬಿದಿರೆ

ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಮಾರ್ಚ್ 6ರಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ

ಮೂಡುಬಿದಿರೆ ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಮಾರ್ಚ್ 06ರಿಂದ ಮಾ 08ರವರೆಗೆ ಪಡುಮಾರ್ನಾಡು ವೇ. ಮೂ. ಅನಂತ ಪದ್ಮನಾಭ ಅಸ್ರಣ್ಣರ ನೇತೃತ್ವದಲ್ಲಿ ಅಷ್ಟೋತ್ತರ ಶತ ಬ್ರಹ್ಮಕಲಶ ಹಾಗೂ ಶ್ರೀ ದೇವಿಯ ದರ್ಶನ ನಡೆಯಲಿದೆ.

ಮಾರ್ಚ್6ರಂದು ವೈಭವದ ಹೊರೆ ಹೊರೆಕಾಣಿಕೆ ಮೆರವಣಿಗೆ ಸ್ವರಾಜ್ಯ ಮೈದಾನದಿಂದ ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದವರೆಗೆ ನಡೆಯಲಿದೆ.

ಮಾರ್ಚ್ 7ರಂದು ಪ್ರಾಯಶ್ಚಿತ ಹೋಮಗಳು, ನವಗ್ರಹ ಹೋಮ, ಭೂ ವರಾಹ ಹೋಮ, ಶಾಂತಿ ಹೋಮಗಳು, ಬ್ರಹ್ಮಕಲತ ಮಂಡಲ ರಚನೆ, 10ರ ಕಲಶ ಮಂಡಲಾರಾಧನೆ, ಪ್ರಧಾನ ಹೋಮಗಳು, ಕಲಶಾಧಿವಾಸ ಪರಿವಾರ ದೈವಗಳ ಕಲಶಾಧಿವಾಸ, ಪ್ರಧಾನ ಹೋಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಮಾರ್ಚ್ 8ರಂದು ಬೆಳಿಗ್ಗೆ ಗಂಟೆ 11:30ಕ್ಕೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಕಲ್ಪೋಕ್ತ ಪೂಜೆ, ತೀರ್ಥಪ್ರಸಾದ ವಿತರಣೆ. ಮಧ್ಯಾಹ್ನ ಗಂಟೆ 12:30ಕ್ಕೆ : ಪಲ್ಲಪೂಜೆ, ಅನ್ನಸಂತರ್ಪಣೆ, ಭಜನಾ ಸಂಕೀರ್ತನೆ,  ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ . ಬೆಳುವಾಯಿ ಇವರಿಂದ  ಯಕ್ಷ ಗಾನ ಹಾಸ್ಯ ವೈಭವ. ಹಾಗೂ ಪಿಂಗಾರ ಕಲಾವಿದರಿಂದ ಓಂಕಾರ ತುಳು ನಾಟಕ ಪ್ರದರ್ಶನಗೊಳ್ಳಲಿದೆ. .

Related posts

ಮೂಡುಬಿದಿರೆಯಲ್ಲಿ ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಸಮಾವೇಶ- ದುಶ್ಚಟದಿಂದ ಮುಕ್ತರಾಗಿ : ಮಾಜಿ ಸಚಿವ ಅಭಯಚಂದ್ರ ಕರೆ

Madhyama Bimba

ಮೂಡುಬಿದಿರೆಯಲ್ಲಿ ‘ವಿಶ್ವ ಕಾರ್ಮಿಕ ದಿನಾಚರಣೆ’ಗೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಕಣ್ಣಿನ ತಪಾಸಣಾ

Madhyama Bimba

ಮೆಸ್ಕಾಂ ಗ್ರಾಹಕ ಸಲಹಾ ಸಮಿತಿಗೆ ಶಾಸಕ ಕೋಟ್ಯಾನ್ ಅಧ್ಯಕ್ಷ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More