ಕಾರ್ಕಳ ಕ್ಷೇತ್ರದಲ್ಲಿ ಕೃಷಿ ಉತ್ತೇಜಿಸುವ ದೂರದೃಷ್ಟಿಯನ್ನಿಟ್ಟುಕೊಂಡು ಅಂದಿನ ಇಂಧನ ಸಚಿವರಾಗಿದ್ದ ಶ್ರೀ ವಿ ಸುನಿಲ್ ಕುಮಾರ್ ರವರು ಕಾರ್ಕಳ ಭಾಗದ ರೈತ ವರ್ಗಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿರುವ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಇಂದು ಸ್ಥಗಿತಗೊಂಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ ದುರಾಡಳಿತಕ್ಕೆ ಹಾಗೂ ದಿವಾಳಿತನಕ್ಕೆ ಸಾಕ್ಷಿಯಾಗಿದೆ.
ಕಳೆದ 3 ವರ್ಷಗಳಿಂದ ನಿರಂತರವಾಗಿ ನೂರಾರು ರೈತರ ಕೃಷಿ ಭೂಮಿಗೆ ನೀರಾವರಿಯನ್ನು ಒದಗಿಸುತ್ತಿದ್ದ ಈ ಮಹತ್ವಾಕಾಂಕ್ಷಿ ಯೋಜನೆ, ವಿದ್ಯುತ್ ಬಿಲ್ ಪಾವತಿಯಾಗದ ಕಾರಣಕ್ಕೆ ಇಂದು ಸ್ಥಗಿತಗೊಂಡಿರುವುದು ಅತ್ಯಂತ ದುಃಖದ ಹಾಗೂ ನಾಚಿಕೆಗೇಡಿನ ಸಂಗತಿ. ಸುಮಾರು 2 ಕೋಟಿ ರೂಪಾಯಿಗೂ ಅಧಿಕ ವಿದ್ಯುತ್ ಬಿಲ್ಲನ್ನು ಪಾವತಿಸದೇ ಬಾಕಿ ಇರಿಸಿಕೊಂಡು ಈ ಯೋಜನೆ ಸ್ಥಗಿತಗೊಳ್ಳಲು ನೇರ ಹೊಣೆಯಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ, ಕಾಂಗ್ರೆಸ್ಸಿನ ಈ ರೈತ ವಿರೋಧಿ ನಡೆಯ ವಿರುದ್ಧ ಮಾರ್ಚ್ 4 ರಂದು ಕಾರ್ಕಳ ಬಿಜೆಪಿಯ ವತಿಯಿಂದ ಎಣ್ಣೆ ಹೊಳೆ ಅಣೆಕಟ್ಟಿನ ಬಳಿ ಸಾಯಂಕಾಲ 04 :00 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಅಧ್ಯಕ್ಷರಾದ ನವೀನ್ ನಾಯಕ್ ತಿಳಿಸಿದ್ದಾರೆ.
ಎಲ್ಲಾ ವರ್ಗದ ಕೃಷಿಕರು, ರೈತರು, ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತ ವರ್ಗವನ್ನು ಬೆಂಬಲಿಸಬೇಕಾಗಿ ಅವರು ಮನವಿ ಮಾಡಿದ್ದಾರೆ
previous post
