ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ ) ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕಾರ್ಕಳ ವಲಯದ ವತಿಯಿಂದ, ಅವಿಭಜಿತ ಜಿಲ್ಲೆಯ 14 ವಲಯಗಳಿಗಾಗಿ ಛಾಯಾ ಟ್ರೋಫಿ 2026 ರನ್ನು ಕಾರ್ಕಳದ ಗಾಂಧೀ ಮೈದಾನದಲ್ಲಿ 15 ಮಾರ್ಚ್ ಆದಿತ್ಯವಾರದಂದು ನೆರವೇರಿಸಲಾಯಿತು.
ಈ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಸುಮಾರು 12 ವಲಯಗಳ ತಂಡ ಭಾಗಿಯಾಗಿದ್ದು, ಕ್ರಿಕೆಟ್ ಮತ್ತು ಹಗ್ಗಜಗ್ಗಾಟಕ್ಕೆ ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ನ ಅಧ್ಯಕ್ಷರಾದ ಶ್ರೀ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಇವರು, ಜಿಲ್ಲಾ ಮಟ್ಟದ ಈ ಸ್ಪರ್ಧೆಯು ಛಾಯಾಗ್ರಾಹಕರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಒಂದು ಉತ್ತಮ ವೇದಿಕೆಯಾಗಿದೆ ಅಲ್ಲದೇ ಉಭಯ ಜಿಲ್ಲೆಯ ಸಂಘಟನೆ ಜಿಲ್ಲೆ ಎರಡಾದರೂ ಸಂಘಟನೆಯು ಒಂದೇ ಆಗಿರುವುದು ಶ್ಲಾಘನೀಯ ಅದೂ ಅಲ್ಲದೇ ನಾನು ನೋಡಿದ ಸಂಘಟನೆಯಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಛಾಯಾಗ್ರಾಹಕರ ಸಂಘವು ಎಲ್ಲರಿಗೂ ಮಾದರಿಯಾದ ಸಂಘಟನೆ ಎಂದು ತಮ್ಮ ಮಾತಿನಲ್ಲಿ ನುಡಿದರು.
ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಶ್ರೀ ಪ್ರಮೋದ್ ಚಂದ್ರ ಪೈ ಅಧ್ಯಕ್ಷರು ಎಸ್. ಕೆ. ಪಿ. ಎ ಕಾರ್ಕಳ ವಲಯ ಇವರು ವಹಿಸಿದ್ದು,
ಮುಖ್ಯ ಅತಿಥಿಗಳಾಗಿ, ಶ್ರೀ ನವೀನ್ ರೈ ಪಂಜಳ ಜಿಲ್ಲಾಧ್ಯಕ್ಷರು ಎಸ್. ಕೆ. ಪಿ. ಎ. ದ. ಕ ಮತ್ತು ಉಡುಪಿ ಜಿಲ್ಲೆ, ಶ್ರೀ ತಾರಾನಾಥ್ ಕೋಟ್ಯಾನ್ ಸೂರಾಲು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಿಯಾರು, ಶ್ರೀ ಪ್ರಕಾಶ್ ಪೂಜಾರಿ ಕೆರ್ವಾಸೆ ಅಧ್ಯಕ್ಷರು ಯುವ ವಾಹಿನಿ( ರಿ) ಕಾರ್ಕಳ ಘಟಕ, ಶ್ರೀ ಅಜಯ್ ಮಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಎಸ್. ಕೆ. ಪಿ. ಎ. ದ.ಕ.ಮತ್ತು ಉಡುಪಿ ಜಿಲ್ಲೆ,
ಶ್ರೀ ದತ್ತಾತ್ರೇಯ ಜಿಲ್ಲಾ ಉಪಾಧ್ಯಕ್ಷರು ಎಸ್.ಕೆ. ಪಿ. ಏ. ದ. ಕ. ಮತ್ತು ಉಡುಪಿ ಜಿಲ್ಲೆ, ಶ್ರೀ ಹರೀಶ್ ಕುಂದರ್ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಎಸ್. ಕೆ. ಪಿ.ಎದ. ಕ.ಉಡುಪಿ ಜಿಲ್ಲೆ, ಶ್ರೀ ವೃಷಭ ರಾಜ್ ಕಡಂಬ ಕೇರ್ತಡಿ ಗುತ್ತು ಕುಕ್ಕುಂದೂರು, ಶ್ರೀ ಸಂತೋಷ್ ಜೈನ್ ರೆಂಜಾಳ, ಶ್ರೀ ಸುಶೀಲ್ ಕುಮಾರ್ ಟಿ ವಿ ಗೌರವಾಧ್ಯಕ್ಷರು, ಶ್ರೀ ಶೇಖರ್ ಕುಕ್ಕುಜೆ ಪ್ರಧಾನ ಕಾರ್ಯದರ್ಶಿ ಎಸ್. ಕೆ. ಪಿ.ಎ. ಕಾರ್ಕಳ ವಲಯ, ವಿ. ಆರ್ ಸತೀಶ್ ಆಚಾರ್ಯ ಕೋಶಾಧಿಕಾರಿ, ಸುಶಾಂತ್ ಕಿಯಾರ ಕ್ರೀಡಾ ಕಾರ್ಯದರ್ಶಿ ಮತ್ತು ಅಶ್ವತ್ ದೇವಾಡಿಗ ಜೊತೆ ಕ್ರೀಡಾ ಕಾರ್ಯದರ್ಶಿ ಇವರೆಲ್ಲ ಉಪಸ್ಥಿತರಿದ್ದರು.
ಬಂದ ಎಲ್ಲಾ ವಲಯದ ಸದಸ್ಯರಿಗೂ ಮುಖ್ಯ ಅತಿಥಿಗಳಿಗೂ ಬೆಳಗಿನ ಉಪಹಾರ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಸಾಯಂಕಾಲ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶ್ರೀ ಪ್ರಮೋದ್ ಚಂದ್ರ ಪೈ ಅಧ್ಯಕ್ಷರು ಎಸ್. ಕೆ.ಪಿ.ಎ.ಕಾರ್ಕಳ ವಲಯ ಇವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ, ಶ್ರೀ ಗಿರೀಶ್ ಆಳ್ವ ಅಧ್ಯಕ್ಷರು ವರಹಾ ಫೌಂಡೇಶನ್ (ರಿ ), ಶ್ರೀ ಪ್ರಕಾಶ್ ಸೇರಿಗಾರ್ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಎಸ್. ಕೆ. ಪಿ.ಎ. ದ. ಕ.ಉಡುಪಿ ಜಿಲ್ಲೆ, ಶ್ರೀ ಪದ್ಮಪ್ರಸಾದ್ ಜೈನ್ ನಿಕಟಪೂರ್ವ ಜಿಲ್ಲಾಧ್ಯಕ್ಷರು ಎಸ್. ಕೆ. ಪಿ. ಎ. ದ.ಕ.ಮತ್ತು ಉಡುಪಿ ಜಿಲ್ಲೆ, ಶ್ರೀ ವಾಸುದೇವ ರಾವ್ ಅಧ್ಯಕ್ಷರು ಎಸ್ ಕೆ ಪಿ ಏ ಸೊಸೈಟಿ ಮಂಗಳೂರು ಮತ್ತು ಶ್ರೀ ಅವಿನಾಶ್ ಶೆಟ್ಟಿ ಗೌರವಾಧ್ಯಕ್ಷರು ಕ್ರಿಕೆಟ್ ಅಸೋಸಿಯೇಷನ್ ಕಾರ್ಕಳ ತಾಲೂಕು ಇವರೆಲ್ಲ ಉಪಸ್ಥಿತರಿದ್ದರು.
ಮುಂಜಾನೆ, ವಲಯದ ಹಿರಿಯ ಸದಸ್ಯರ ಕ್ರಿಕೆಟ್ ಪ್ರದರ್ಶನ ಪಂದ್ಯಾಟದಲ್ಲಿ ಶ್ರೀ ದತ್ತಾತ್ರೇಯ ಹಿರಿಯಂಗಡಿ ಇವರ ತಂಡವು ಪ್ರಥಮ ಸ್ಥಾನ ಪಡೆದು ಪ್ರಸಾದ್ ಐಸಿರ ಇವರ ತಂಡವು ದ್ವಿತೀಯ ಸ್ಥಾನ ಪಡೆಯಿತು.
ಕ್ರಿಕೆಟ್ ನಲ್ಲಿ ಪ್ರಥಮ ಸ್ಥಾನವನ್ನು ಮೂಡುಬಿದಿರಿ ತಂಡವು ತನ್ನದಾಗಿಸಿಕೊಂಡು ಕಾರ್ಕಳ ವಲಯವು ದ್ವಿತೀಯ ಸ್ಥಾನವನ್ನು ಪಡೆಯಿತು, ಅಲ್ಲದೆ ಹಗ್ಗಜಗ್ಗಾಟದಲ್ಲಿ ಬಂಟ್ವಾಳ ವಲಯವು ಪ್ರಥಮ ಸ್ಥಾನ ಪಡೆದು ಕಾರ್ಕಳ ವಲಯವು ದ್ವಿತೀಯ ಪ್ರಶಸ್ತಿ ಬಾಚಿಕೊಂಡಿತು.

