ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ:  ರಸ್ತೆ ಸಂಚಾರ ಸುರಕ್ಷತಾ ಜಾಗೃತಿ ಅಭಿಯಾನ 

ಸಂಚಾರ ಸುರಕ್ಷತೆ ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ರಸ್ತೆಯು ನಮ್ಮ ಹಕ್ಕಲ್ಲ ಅದು ಸರಕಾರ ನೀಡಿದ ಸವಲತ್ತು, ಮನೆಯಿಂದ ಹೊರಟವರು ಸುರಕ್ಷಿತವಾಗಿ ಹಿಂತಿರುಗಿ, ನಿಮ್ಮನ್ನು ನಂಬಿಕೊಂಡ ನಿಮ್ಮ ಕುಟುಂಬವಿದೆ. ಆದುದರಿಂದ ಸಂಚಾರ ನಿಯಮಗಳನ್ನು ಪಾಲಿಸಿ, ನೀವು ಸುರಕ್ಷಿತವಾಗಿರುವುದರ ಜೊತೆಗೆ ಇತರರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ಇಲ್ಲಿನ ವಾಹನ ನಿರೀಕ್ಷಕ ಶ್ರೇಯಸ್ ಕುಮಾರ್ ಕೆ ಹೇಳಿದರು.

ಅವರು ರೋಟರಿ ಕ್ಲಬ್ ಕಾರ್ಕಳ ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ಜಿಲ್ಲೆ, ಹಾಗೂ ಪೋಲೀಸ್ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದ ರಸ್ತೆ ಸಂಚಾರ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಚಾಲಕರು ಹಾಗೂ ಜನತೆಗೆ ರಸ್ತೆ ಸುರಕ್ಷತೆ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡಿ ಮಾತನಾಡಿದರು.

ಕಾರ್ಕಳ ನಗರ ಆರಕ್ಷಕ ಠಾಣೆಯ ಉಪನಿರೀಕ್ಷಕ ಮುರಳಿಧರ್ ನಾಯಕ್ ಮಾತನಾಡಿ ವಾಹನ ಚಲಾವಣೆಯಲ್ಲಿ ತಾರತಮ್ಯ ಬೇಡ. ಸಣ್ಣ ವಾಹನ ದೊಡ್ಡ ವಾಹನ ಎಲ್ಲವೂ ಸಮಾನ, ಎಲ್ಲರ ಜೀವವು ಅತ್ಯಂತ ಅಮೂಲ್ಯ. ಚಾಲಕರು ಕರ್ಕಶ ಹಾರ್ನ್ ಹಾಕುವುದರಿಂದ ಇತರ ವಾಹನ ಚಾಲಕರಲ್ಲಿ ಗೊಂದಲ ಸೃಷ್ಟಿಯಾಗುವಂತೆ ಮಾಡದಿರಿ ಪಾದಾಚಾರಿಗಳು ರಸ್ತೆ ನಿಯಮಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜ್ ಮಾತನಾಡಿ ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸಬೇಕು. ಯುವಜನರು ದೇಶದ ಆಸ್ತಿ, ಅವರ ಅತ್ಯಂತ ಜಾಗೃತರಾಗಿರಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡ ರೋಟರಿ ಕ್ಲಬ್ ಕಾರ್ಕಳ ಇವರು ಅಭಿನಂದನೀಯರು ಎಂದರು.

ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮುದಾಯ ಸೇವಾ ಚೇರ್‌ಮೆನ್ ವಸಂತ್ ಎಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ: ರೋಟರಿ

 

Related posts

ಅಜೆಕಾರು: ಕಾಣೆಯಾದ ವೃದ್ಧರೋರ್ವರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತ್ಯು

Madhyama Bimba

ಹೆಬ್ರಿ ತಾಲ್ಲೂಕಿನಾದ್ಯಂತ ಭಾರಿ ಗಾಳಿ ಮಳೆ : ನೂರಾರು ಮರಗಳು, ವಿದ್ಯುತ್ ಕಂಬಗಳು ಧರಗೆ : ಕೃಷಿಗೆ ಅಪಾರ ನಷ್ಟ !

Madhyama Bimba

ವಸತಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ : ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More