ಕಾರ್ಕಳ

ಅಜೆಕಾರು: ಕಾಣೆಯಾದ ವೃದ್ಧರೋರ್ವರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತ್ಯು

ಅಜೆಕಾರು: ಕಾಣೆಯಾದ ವೃದ್ಧರೋರ್ವರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಡಿ. 07ರಂದು ವರದಿಯಾಗಿದೆ.


ಅಂಡಾರು ಗ್ರಾಮದ ಮುಟ್ಲುಪಾಡಿ ದರ್ಖಾಸು ಕೆಸಲ್ಕೆ ಮನೆ ನಿವಾಸಿ ಕಾಳು ನಾಯ್ಕ (79) ಮೃತಪಟ್ಟವರು.


ಕಾಳು ನಾಯ್ಕ ರವರು ಪ್ರಾಯಸ್ಥರಾಗಿದ್ದು, ಮರೆವು ಕಾಯಿಲೆಯಿಂದ ಆಗಾಗ ಮನೆಯಿಂದ ಹೋದವರು 2-3 ದಿನಗಳ ನಂತರ ವಾಪಾಸ್ಸು ಮನೆಗೆ ಬರುತ್ತಿದ್ದರು. ಡಿ. 03ರಂದು ಪಕ್ಕದ ಮನೆಗೆ ಬೀಗರ ಊಟಕ್ಕೆ ಹೋದವರು, ವಾಪಾಸ್ಸು ಮನೆಗೆ ಬಾರದೇ ಅಕ್ಕ-ಪಕ್ಕದವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗದೆ ಡಿ.06ರಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿರುತ್ತದೆ.

ಡಿ.07 ಕಾಳು ನಾಯ್ಕರವರು ಮರೆವು ಕಾಯಿಲೆಯಿಂದ ದಾರಿ ತಪ್ಪಿ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟಿರುತ್ತಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ: ತಾಲೂಕು ಕಚೇರಿಯ ಸಿಬ್ಬಂದಿ ಅಮಾನತು

Madhyama Bimba

ಮಾ. 24: ಕುಚ್ಚೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಂಗಪೂಜಾ ಮಹೋತ್ಸವ ಹಾಗೂ ಕೆಂಡೋತ್ಸವ

Madhyama Bimba

ಜೆಇಇ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ನಾಗದೇವ್ ಎಂ.ಜಿ. ಬಿ ಪ್ಲಾನಿಂಗ್ ನಲ್ಲಿ ಜನರಲ್ ಇಡಬ್ಲ್ಯೂಎಸ್ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More