ಕಾರ್ಕಳ

ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ ನಲ್ಲಿ ವಿಶೇಷ ಆದ್ಯತೆ ನೀಡಿ : ಮುಖ್ಯಮಂತ್ರಿಗೆ ನೀರೆ ಕೃಷ್ಣ ಶೆಟ್ಟಿ ಪತ್ರ

ಹೆಬ್ರಿ : ಉಡುಪಿ ಜಿಲ್ಲೆಗೆ ಕಳೆದ ಹಲವಾರು ವರ್ಷಗಳಿಂದ ಯಾವೂದೇ ಬೃಹತ್‌ ಯೋಜನೆಗಳು ದೊರೆಯದೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಜಿಲ್ಲೆಯ ಜನರು ಮಹತ್ವದ ಗ್ಯಾರಂಟಿ ಯೋಜನೆ, ವಿದೇಶ ಮತ್ತು ಅಂತರಾಜ್ಯದಿಂದ ದುಡಿದು ತಂದ ಆದಾಯದಿಂದ ತಲಾ ವರಮಾನವನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಈ ಸಲದ ರಾಜ್ಯದ ಬಜೆಟ್‌ ನಲ್ಲಿ ಉಡುಪಿ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಜನೋಪಯೋಗಿಯಾದ ಬೃಹತ್‌ ಯೋಜನೆಗಳನ್ನು ಘೋಷಣೆ ಮಾಡಬೇಕು ಎಂದು ಸಾಮಾಜಿಕ ಮುಖಂಡರಾದ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.


ಉಡುಪಿ ಜಿಲ್ಲೆಯು ಶಿಕ್ಷಣ, ಆರೋಗ್ಯ ಶಿಕ್ಷಣ, ಬ್ಯಾಂಕಿಂಗ್‌, ಹೊಟೇಲ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಆದರೆ ಅಂದು ಶ್ರೀನಿವಾಸ ಮಲ್ಯರು ರೂಪಿಸಿದ ಮಹತ್ವದ ಯೋಜನೆಗಳು ಇನ್ನೂ ಕಾರ್ಯಗತವಾಗಿಲ್ಲ,

ಉಡುಪಿ ಜಿಲ್ಲೆಯ ಆಧ್ಯತೆಯ ಬೇಡಿಕೆಗಳು :
1. ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಸರ್ಕಾರಿ ವೈಧ್ಯಕೀಯ ಕಾಲೇಜು.
2. ಬ್ರಹ್ಮಾವರಕ್ಕೆ ಕೃಷಿ ವಿಶ್ವವಿದ್ಯಾಲಯ.
3. ಪಡುಬಿದ್ರೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
4. ಆಗುಂಬೆಘಾಟಿಯನ್ನು ವಿಸ್ತರಿಸಿ ಘನವಾಹನ ಸಂಚಾರಕ್ಕೆ ಮುಕ್ತಗೊಳಸುವುದು.
5. ಮಂಗಳೂರಿನಿಂದ ಬೈಂದೂರಿಗೆ ಮೆಟ್ರೋ ರೈಲು ಯೋಜನೆ.
6. ಉಡುಪಿ ಜಿಲ್ಲೆ ಪ್ರವಾಸೋಧ್ಯಮಕ್ಕೆ ವಿಶೇಷ ಆದ್ಯತೆ ನೀಡುವುದು.
7. ಉಡುಪಿ ಜಿಲ್ಲೆಯ ಅರಣ್ಯ, ಡೀಮ್ಡ್‌ ಫಾರೆಸ್ಟ್‌, ಕುಮ್ಕಿ ಮತ್ತು ಕಂದಾಯ ಭೂಮಿಯನ್ನು ಜಂಟಿ ಸರ್ವೆ ನಡೆಸುವುದು.
ಮುಂತಾದ ಜನಪರವಾದ ಯೋಜನೆಗಳನ್ನು ಬಜೆಟ್‌ ನಲ್ಲಿ ಘೋಷಿಸಿ ಉಡುಜಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವಂತೆ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

Related posts

ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Madhyama Bimba

ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನಿಂದ ಸ್ವಚ್ಛತಾ ಅಭಿಯಾನ

Madhyama Bimba

ಕೆಜಿಟಿಟಿಐ ಕಾರ್ಕಳ: ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More