ಕಾರ್ಕಳ

ಲೋಕಾರ್ಪಣೆಗೆ ಸಜ್ಜುಗೊಳ್ಳುತ್ತಿದೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಶಿರ್ಲಾಲು

ಶಿರ್ಲಾಲು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ.) ಶಿರ್ಲಾಲು ಇದರ ವತಿಯಿಂದ ಸುಸ್ಸಜ್ಜಿತವಾದ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಶಾಸಕರು ಹಾಗೂ ಸಮಾಜ ಬಾಂಧವರ, ದಾನಿಗಳ ಸಹಕಾರದಿಂದ ಸುಮಾರು 1 ಕೋಟಿ ರೂ, ವೆಚ್ಚದಲ್ಲಿ ಭವ್ಯವಾದ ನಾರಾಯಣ ಗುರು ಮಂದಿರ ಹಾಗೂ ಸಭಾಂಗಣವು ಮಾ. 07ಮತ್ತು 08ರಂದು ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಗೊಳ್ಳಲಿದೆ.


ಪರಮಪೂಜ್ಯ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠ ಬೆಂಗಳೂರು ಹಾಗೂ ಶ್ರೀ ಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕರಾದ ಸದಾನಂದ ಶಾಂತಿ ಇವರ ನೇತೃತ್ವದಲ್ಲಿ ವಿಧಿ ವಿಧಾನಪೂರ್ವಕ ನೆರವೇರಲಿರುವುದು.

ಈ ಪ್ರಯುಕ್ತ ಮಾ. 07ರಂದು ಅಪರಾಹ್ನ 2.30ರಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆ ಮತ್ತು ಹಸಿರು ಹೊರೆಕಾಣಿಕೆ ಪುರಮೆರವಣಿಗೆಯೊಂದಿಗೆ ಭಜನೆ ತಂಡಗಳು ಮತ್ತು ಸ್ತಬ್ಧ ಚಿತ್ರಗಳು ವಿವಿಧ ವಾದ್ಯ ಮೇಳಗಳ ಭವ್ಯ ಮೆರವಣಿಗೆಯು ಶಿರ್ಲಾಲು ಕಿನ್ನಿಗೋಳಿ ಕಟ್ಟೆ ಗರಡಿಯಿಂದ ಹೊರಟು ಶ್ರೀ ಗುರುಮಂದಿರಕ್ಕೆ ತಲುಪಲಿರುವುದು. ಸಾಯಂಕಾಲ ಗಂಟೆ 4.30ಕ್ಕೆ ಫಲಹಾರ, ಗಂಟೆ 5.00ಕ್ಕೆ ಋತ್ವಿಜರ ಸ್ವಾಗತ, 6.00ಕ್ಕೆ ಭಜನಾ ಕಾರ್ಯಕ್ರಮ, ಶಿಲ್ಪ ಪೂಜೆ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ವಾಸ್ತು ಶುಭಾರಂಭ, ವರ್ಣಕ್ರಿಯೆ, ಪ್ರಾಯಶ್ವಿತ ಹೋಮ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ದಿಗ್ಬಲಿ ಪೂಜೆ, ಪ್ರಕಾರ ಶುದ್ಧಿ, ಗುರುಗಳ ಬಿಂಬ ಶುದ್ಧಿ, ಸಯ್ಯಾದಿವಾಸ ನಡೆಯಲಿದೆ.’

ಮಾ. 08ರಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗುರುವರ್ಯರ ಬಿಂಬ ಶುದ್ದಿ ಪ್ರತಿಷ್ಠಾ ಹೋಮ, ಸೂರ್ಯೋದಯದಲ್ಲಿ ಮೂರ್ತಿ ಪ್ರತಿಷ್ಠೆ, ಶಿಲಾ ಕಲಶ ಪ್ರತಿಷ್ಠೆ, ಮಂಡಲ ಪೂಜೆ, ಕಲಶ ಪೂಜೆ, ಬೆಳಿಗ್ಗೆ 9.55ಕ್ಕೆ ಕುಂಭಾಭಿಷೇಕ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ.ಬೆಳಿಗ್ಗೆ ಗಂಟೆ 10.00ಕ್ಕೆ ಸಭಾಕಾರ್ಯಕ್ರಮ, ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 3.30ರಿಂದ ಬಿಲ್ಲವ ಸಮಾಜ ಬಾಂಧವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂಟೆ 4.30ರಿಂದ ಸಭಾಕಾರ್ಯಕ್ರಮ, ರಾತ್ರಿ ಗಂಟೆ 7.00ಕ್ಕೆ ಶ್ರೀ ಆದಿಧೂಮಾವತಿ, ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Related posts

ನ.1ಕ್ಕೆ ಕಾರ್ಕಳ ಬಸ್ಸು ಏಜೆಂಟರ ಬಳಗದಿಂದ ರಕ್ತದಾನ ಶಿಬಿರ, ಸೌಹಾರ್ದ ಸಂಗಮ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭ

Madhyama Bimba

ನಾಳೆ (ಫೆ. 26ರಂದು) ಮಾನಸ ಕಂಫರ್ಟ್ಸ್ ಉದ್ಘಾಟನೆ

Madhyama Bimba

ಸುಂದರ ಕೋಟ್ಯಾನ್ ಪಂಜಿಕುಡೇಲು ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More