ಕಾರ್ಕಳಹೆಬ್ರಿ

ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಯಶಸ್ವಿ ಶ್ರೀಮನ್ನಾಗಮಂಡಲ: ಕೃತಜ್ಞತೆ ಸಮರ್ಪಣೆ ಸಭೆ

ಮುನಿಯಾಲು : ಕೃಷಿಲೋಕ ಮುನಿಯಾಲಿನ ಗೋಧಾಮದಲ್ಲಿ ಪ್ರಕೃತಿಯಿಂದ ಪ್ರಕೃತಿಗೆ ವಿನೂತನ ಪರಿಕಲ್ಪನೆಯಲ್ಲಿ‌ 3 ದಿನಗಳ ಕಾಲ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆದ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದ ಎಲ್ಲರ ಪಾಲ್ಗೋಳುವಿಕೆಯಿಂದ ಅತ್ಯಂತ ಐಶಸ್ವಿಯಾಗಿ ಸಮಾಜಕ್ಕೆ ಅತ್ಯುತ್ತಮ ಸಂದೇಶದ ರವಾನೆಯಾಗಿದೆ. ಸರ್ವರೂ ಒಂದಾಗಿ ಸೇವೆ ಮಾಡಿದ್ದರಿಂದ ಯಶಸ್ವಿಯಾಗಿ ದಾಖಲೆ ನಿರ್ಮಾಣವಾಗಿದೆ ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್ ಕೃತಜ್ಞತೆ ಸಲ್ಲಿಸಿದರು.


ಅವರು ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆದ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದ ಯಶಸ್ಸಿಗಾಗಿ ನಡೆದ ಕೃತಜ್ಞತೆ ಸಮರ್ಪಣಾ ಸಭೆಯಲ್ಲಿ ಮಾತನಾಡಿದರು.

ನಾವು ಸಮಾಜದಲ್ಲಿ ಯಾವೂದೇ ಕಾರ್ಯಗಳನ್ನು ಮಾಡುವಾಗ ಪಂಚಭೂತಗಳ ರಕ್ಷಣೆಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಬೇಕು, ಅದೇ ನಾವು ಪರಿಸರಕ್ಕೆ, ಸಮಾಜಕ್ಕೆ ನೀಡುವ ಮಹಾನ್‌ ಕೊಡುಗೆ, ಅಂತಹ ಮಹತ್ವದ ಪುಣ್ಯದ ಕಾರ್ಯ ಗೋಧಾಮದ ಮಣ್ಣಿನಲ್ಲಿ ಎಲ್ಲರ ಒಗ್ಗಟ್ಟಿನಿಂದ ನಡೆದಿದೆ ಎಂದು ಡಾ. ಜಿ ರಾಮಕೃಷ್ಣ ಆಚಾರ್ ಹೇಳಿದರು.

ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ಸಾಣೂರುಗುತ್ತು ದೇವಿಪ್ರಸಾದ ಶೆಟ್ಟಿ ಮಾತನಾಡಿ  2 ತಿಂಗಳ ಎಲ್ಲರ ಶ್ರಮದ ಫಲವಾಗಿ ಶ್ರೀಮನ್ನಾಗಮಂಡಲ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. 25 ಸಾವಿರಕ್ಕೂ ಹೆಚ್ಚು ಮಂದಿ ಯಾವೂದೇ ಗೊಂದಲವಿಲ್ಲದೆ ಅನ್ನ ಪ್ರಸಾದ ಸ್ವೀಕರಿಸಿರುವುದು ದಾಖಲೆಯ ಸಂಗತಿ. ಎಲ್ಲರೂ ತಮ್ಮದೆ ಕಾರ್ಯಕ್ರಮ ಎಂದು ಸೇವೆ ಮಾಡಿದ್ದರಿಂದ ಯಶಸ್ವಿಯಾಗಲು ಸಾಧ್ಯವಾಗಿದೆ. ಶ್ರಮಿಸಿದ ಸರ್ವರಿಗೂ ನಾವು ಅಭಾರಿಯಾಗಿದ್ದೇವೆ ಎಂದರು.

ಮುಖಂಡರಾದ ಮುನಿಯಾಲು ದಿನೇಶ ಪೈ, ಮುನಿಯಾಲು ಗೋಪಿನಾಥ ಭಟ್‌, ಡಾ.ಕೆ.ಸುದರ್ಶನ್‌ ಹೆಬ್ಬಾರ್‌, ಜ್ಯೋತಿ ಹರೀಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮುಂತಾದವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಮುನಿಯಾಲು ಸಂಜೀವಿನಿ ಗೋಧಾಮದ ಸವಿತಾ ಆರ್‌ ಆಚಾರ್‌, ವರಂಗ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ಸಂತೋಷ ಅಮೀನ್‌, ಕಡ್ತಲ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ಸುಕೇಶ ಹೆಗ್ಡೆ, ಬೆಳುವಾಯಿ ಸುಂದರ ಆಚಾರ್ಯ, ಸಮೃದ್ಧಿ ಪ್ರಕಾಶ ಶೆಟ್ಟಿ, ಸತೀಶ ಪುಜಾರಿ ಎಳ್ಳಾರೆ, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಗಣ್ಯರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ಸಭೆಯಲ್ಲಿ ನಾಗಮಂಡಲದ ವಿವಿಧ ಸಮಿತಿಯ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Related posts

ರಾಜೀವ ಗಾಂಧಿ : ವೀರಪ್ಪ ಮೊಯಿಲಿ ಹಾಕಿದ ಅಡಿಪಾಯ ಇಂದು ಗಟ್ಟಿಯಾಗಿ ಫಲ ನೀಡಿದೆ – ನೀರೆ ಕೃಷ್ಣ ಶೆಟ್ಟಿ

Madhyama Bimba

ನ.1ಕ್ಕೆ ಕಾರ್ಕಳ ಬಸ್ಸು ಏಜೆಂಟರ ಬಳಗದಿಂದ ರಕ್ತದಾನ ಶಿಬಿರ, ಸೌಹಾರ್ದ ಸಂಗಮ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭ

Madhyama Bimba

ರೋಟರಿಯಿಂದ ಹೊಸ ವರ್ಷಾಚರಣೆ ಮತ್ತು ವಿವಿಧ ವೃತ್ತಿ ಸಾಧಕರಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More