ಕಾರ್ಕಳಹೆಬ್ರಿ

ಕುಕ್ಕುಂದೂರು – ಕಿನ್ಯಾರ್ ಕಟ್ಟ- ನಕ್ರೆ ಸಂಪರ್ಕ ರಸ್ತೆ ಕುಕ್ಕುಂದೂರು ಪಂಚಾಯತ್ ವತಿಯಿಂದ ರಿಪೇರಿ

ಕಾರ್ಕಳ: ಕುಕ್ಕುಂದೂರಿನ ಪೊಸನೊಟ್ಟಿನಲ್ಲಿರುವ ಕಲ್ಲು ಕಟ್ಟಿಂಗ್ ಫ್ಯಾಕ್ಟರಿಗೆ ಹೋಗುವ ಲಾರಿಯ ಅಬ್ಬರಕ್ಕೆ ಹಾಳಾದ ರಸ್ತೆಯನ್ನು ಇಂದು ಗ್ರಾಮ ಪಂಚಾಯತ್ ವತಿಯಿಂದ ಸರಿಪಡಿಸಲಾಯಿತು.


ಈ ರಸ್ತೆಯು ಹೊಸತಾಗಿ ನಿರ್ಮಾಣ ಮಾಡಲಾಗಿದ್ದು ಡಾಮಾರು ಅಥವಾ ಕಾಂಕ್ರಿಟೀಕರಣವಾಗಿಲ್ಲ. ಆದರೆ ಪೊಸನೊಟ್ಟುನಲ್ಲಿರುವ ಕಲ್ಲು ಕಟ್ಟಿಂಗ್ ಫ್ಯಾಕ್ಟರಿಗೆ ಕಲ್ಲು ತುಂಬಿದ ಘನ ಲಾರಿಗಳು ಹೋಗಿ ರಸ್ತೆಯು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಅಲ್ಲದೆ ಗುಂಡಿ ಬಿದ್ದ ಸ್ಥಳಕ್ಕೆ ವೇಸ್ಟ್ ಕಲ್ಲುಗಳನ್ನು ಹಾಕಿ ರಸ್ತೆಯನ್ನು ಮತ್ತಷ್ಟು ಹಾಳು ಮಾಡಿದ್ದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿತ್ತು.

ಈ ಬಗ್ಗೆ ಮಾಧ್ಯಮ ಬಿಂಬ ಪತ್ರಿಕೆಯು ತನ್ನ ವೆಬ್‌ಸೈಟ್‌ನಲ್ಲಿ ಸಚಿತ್ರ ವರದಿಯನ್ನು ಪ್ರಕಟಿಸಿದ್ದು ಈ ಕೂಡಲೇ ಸ್ಥಳೀಯ ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ಸ್ಪಂದಿಸಿ ರಸ್ತೆಯನ್ನು ತಾತ್ಕಾಲಿಕ ನೆಲೆಯಲ್ಲಿ ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

Related posts

ಟೇಕ್ವಾಂಡೊದಲ್ಲಿ ಸತ್ಯಪ್ರಸಾದ್‌ಗೆ ಚಿನ್ನದ ಪದಕ

Madhyama Bimba

ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದಲ್ಲಿ ಕ್ರಿಯೇಟಿವ್ ಸ್ಫೂರ್ತಿ ಮಾತು-15 ಸರಣಿ ಕಾರ್ಯಕ್ರಮ

Madhyama Bimba

ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More