Blog

ವಿದ್ವಾನ್। ವೇ|| ಮೂ|| ಉಮೇಶ್ ಭಟ್ ಅವರಿಗೆ ಸನ್ಮಾನ

ಶಿರ್ತಾಡಿ – ವಾಲ್ಪಾಡಿ ಶ್ರೀ ಕ್ಷೇತ್ರ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಂತ್ರಿವರ್ಯರಾಗಿ ಸೇವೆ ನೀಡುತ್ತಿರುವ ವಿದ್ವಾನ್। ವೇ|| ಮೂ|| ಉಮೇಶ್ ಭಟ್ ಅವರಿಗೆ ದೇವಸ್ಥಾನದಲ್ಲಿ ಶಾಲು ಪೇಟ ತೊಡಿಸಿ, ಫಲವಸ್ತು,ಸನ್ಮಾನ ಪತ್ರ ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ವಿದ್ಯೆಗೆ ನೀಡುವ ಮಹತ್ವಕ್ಕೆ ಮನ್ನಣೆ ನೀಡುವುದು ಅಗತ್ಯ. ಸಂಸ್ಕೃತ ಎಂದರೆ ದೇವಭಾಷೆ, ಒಳಿತನ್ನೇ ಮಾಡುವಂಥದ್ದು ಎಂದರ್ಥ ಎಂದು ಹೇಳಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಘಟಿಕೋತ್ಸವದಲ್ಲಿ, ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದು ಕರ್ನಾಟಕ ರಾಜ್ಯಪಾಲರಿಂದ ಚಿನ್ನದ ಪದಕ ಸ್ವೀಕರಿಸಿದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿ ಉಮೇಶ್ ಭಟ್ ಅವರ ಸಾಧನೆಯನ್ನು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿ ಶಿಮುಂಜೆಗುತ್ತು ಎಸ್. ಡಿ. ಸಂಪತ್ ಸಾಮ್ರಾಜ್ಯರವರು ಮಾತನಾಡಿ ಮನುಕುಲದ ದೊಡ್ಡ ಮೌಲ್ಯ ಜ್ಞಾನ. ಅದರೊಂದಿಗೆ ಸಂಸ್ಕೃತಿ, ವ್ಯಕ್ತಿತ್ವ ಬೆಳೆಯಬೇಕು. ಶಿಕ್ಷಣವೇ ಶಕ್ತಿ. ಅದನ್ನು ಪಡೆಯುವಲ್ಲಿ ನಾವು ಮುಂದಾಗಬೇಕು ಎಂದರು. ಅನುವಂಶಿಕ ಆಸ್ರಣ್ಣರು ವೇ। ಮೂ। ಉಮಾಶಂಕರ್ ಭಟ್,
ವೈದ್ಯರಾದ ಡಾ|| ಕೆ. ಕೃಷ್ಣರಾಜ್ ಭಟ್, .
ಡಾ|| ಆಶೀರ್ವಾದ್ ಎಂ. ಪಿ., ರೋಟರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ರವಿಕುಮಾರ್, ಭುವನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್ ಟ್ರಸ್ಟಿ ಶ್ರೀಮತಿ ಲತಾ ಜನಾರ್ಧನ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವೇ|| ಮೂ|| ಉಮೇಶ್ ಭಟ್ ಅವರ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಉಮೇಶ್ ಭಟ್ ಅವರ ಮಾತೃಶ್ರೀ ಶ್ರೀಮತಿ ವಸಂತಿ ಭಟ್, ವಿದ್ಯಾಭ್ಯಾಸದ ಗುರುಗಳಾದ ಬಾಹುಬಲಿ ಎಂ. ರಾಜೇಂದ್ರಕುಮಾರ್, ಶ್ರೀಮತಿ ಥೆರೆಜಾ ಕಾರ್ಡೋಜ,ವ್ಯವಸ್ಥಾಪನ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ವಿ. ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರುಗಳು, ಮಾಜಿ ಸದಸ್ಯರುಗಳು, ಸೇವಾ ಸಮಿತಿ,ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಊರ ಪ್ರಮುಖರು ಭಾಗವಹಿಸಿದ್ದರು.
ಉಮೇಶ್ ಭಟ್ ಅವರ ಅಭಿಮಾನಿಗಳು ಹಾರಾರ್ಪಿಸಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಪ್ರಾರ್ಥನೆಯನ್ನು ವಿದ್ಯಾರ್ಥಿಗಳು ನೆರವೇರಿಸಿದರು. ಅಧ್ಯಾಪಕಿ ಸುಮಂಗಲ ಅನೂಪ್ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ಸುದೀಪ್ ಬುಣ್ಣನ್ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಶ್ರೀ ಮಹಾಲಿಂಗೇಶ್ವರ ಯಕ್ಷನಾಟ್ಯ ತರಬೇತಿ ಕೇಂದ್ರ, ಅರ್ಜುನಾಪುರ ಇದರ ಮಕ್ಕಳಿಂದ
ಯಕ್ಷಗಾನ , ಸಭಾ ಕಾರ್ಯಕ್ರಮದ
ನಂತರ ಉಮೇಶ್ ಮಿಜಾರ್ ಮತ್ತು ಬಳಗದವರಿಂದ ಕಾಮಿಡಿ ಶೋ “ತೆಲಿಕೆದ ಗೊಂಚಿಲ್”,
ಸಂಕ್ರಮಣ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಪನ್ನಗೊಂಡಿತು.

Related posts

ಸತೀಶ್ ಆಚಾರ್ಯರಿಗೆ ರಂಗ ಭೂಮಿ ಕಲಾ ರತ್ನ ಪ್ರಶಸ್ತಿ

Madhyama Bimba

ದ್ವೇಷದ ಬರಹ – ನಿಟ್ಟೆಯ ಸುಧಾಕರ ಮೇಲೆ ಕೇಸು ದಾಖಲು

Madhyama Bimba

ಬೋಳದಲ್ಲಿ ಶನಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More